Districts
ನೋಟೀಸ್ಗೆ ಡೋಂಟ್ ಕೇರ್ ಎಂದಿರೋ ಸಾರಿಗೆ ನೌಕರರು

ವಿಜಯಪುರ: ಇಂದು ಕೆಲಸಕ್ಕೆ ಹಾಜರಾಗಿ ಇಲ್ಲ ಮನೆ ಖಾಲಿ ಮಾಡಿ ಅಂತ ವಿಜಯಪುರದ ಸರಕಾರಿ ಕ್ವಾಟರ್ಸ್ ನ ನೌಕರರ ಮನೆಗೆ ವಿಜಯಪುರ ನಿಯಂತ್ರಣಾಧಿಕಾರಿಗಳು ನೋಟಿಸ್ ಅಂಟಿಸಿ ತೆರಳಿದ್ದರು. ಇದಕ್ಕೆ ಡೋಂಟ್ ಕೇರ್ ಎಂದಿರುವ ಸಾರಿಗೆ ನೌಕರರು ಹಾಗೂ ಕುಟುಂಬಸ್ಥರು, ನಾವು ಹಾಗೂ ನಮ್ಮ ಪತಿರಾಯರು ಯಾವುದೇ ಕಾರಣಕ್ಕೂ ಕೆಲಸಕ್ಕೆ ಹೋಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ಅವರು ಏನು ಮಾಡ್ತಾರೋ ಮಾಡ್ಲಿ. ನಿನ್ನೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಂದ ನಂತರ ನಿಯಂತ್ರಣಾಧಿಕಾರಿ ನಾರಯಣಪ್ಪಾ ಬಂದು ಮನೆ ಖಾಲಿ ಮಾಡಿಸಲ್ಲ, ಕೆಲಸಕ್ಕೆ ಹಾಜರಾಗಲು ಮನವಿ ಮಾಡಿದ್ದಾರೆ. ಆದರೆ ಯಾರು ಕೂಡ ಇದಕ್ಕೆ ಅಂಜಿ ಹಾಜರಾಗಲ್ಲ ಅಂತ ಸಾರಿಗೆ ನೌಕರರ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. ಇದರಿಂದ ರಾಜ್ಯ ಸರಕಾರದ ಬೆದರಿಕೆಗೆ ಸಾರಿಗೆ ನೌಕರರ ಕುಟುಂಬಸ್ಥರು ಸೆಡ್ಡು ಹೊಡೆದು ನಿಂತಿದ್ದಾರೆ.
