Connect with us

Corona

ವಿಜಯಪುರದಲ್ಲಿ ಕೊರೊನಾಗೆ ಮತ್ತೊಂದು ಸಾವು- ಮೃತರ ಸಂಖ್ಯೆ 3ಕ್ಕೆ ಏರಿಕೆ

Published

on

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾಕ್ಕೆ ಮತ್ತೊಂದು ಸಾವಾಗಿದೆ. ಈ ಮೂಲಕ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ರೋಗಿ ನಂಬರ್ 640 (62 ವರ್ಷ)ದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಅಸ್ತಮಾ, ಶ್ವಾಸಕೋಶ ಕಾಯಿಲೆ, ಬೊಜ್ಜು ಸೇರಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದು, 3-4 ದಿನಗಳ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಸೋಮವಾರ ಬೆಳಗ್ಗೆ ಈ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಒಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ರೋಗಿ ನಂಬರ್ 228 (13 ವರ್ಷ)ದ ಬಾಲಕನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆ ಸೋಂಕು ತಗುಲಿದ್ದು ಧೃಢಪಟ್ಟಿದೆ. ¸ಸಕಲ ವೈದ್ಯಕೀಯ, ಧಾರ್ಮಿಕ ಶಿಷ್ಠಾಚಾರದಂತೆ ಮಹಿಳೆಯ ಅಂತ್ಯಕ್ರಿಯೆಯನ್ನು ಅಧಿಕಾರಿಗಳು ನೆರವೇರಿಸಿದ್ದಾರೆ.

ಈ ಹಿಂದೆ ರೋಗಿ 257 (69 ವರ್ಷ)ದ ವೃದ್ಧ ಮೃತಪಟ್ಟಿದ್ದು, ರೋಗಿ ನಂಬರ್ 221ರ ಸಂಪರ್ಕದಿಂದ ಸೋಂಕು ತಗುಲಿತ್ತು. ರೋಗಿ ನಂಬರ್ 374 (42 ವರ್ಷ)ದ ವ್ಯಕ್ತಿ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಸುದ್ದಿ ಕೇಳಿನೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ಸಾವಿನ ನಂತರ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ರೋಗಿ ನಂಬರ್ 306 ನಿಂದ ಸೋಂಕು ತಗುಲಿತ್ತು.