Connect with us

Districts

ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಸಚಿವ ಉಮೇಶ್ ಕತ್ತಿ

Published

on

Share this

ವಿಜಯಪುರ: ನಾನು ಯಾಕೆ ಸಿಎಂ ಆಗಬಾರದು ಎಂದು ಹೇಳುವ ಮೂಲಕ ಸಚಿವ ಉಮೇಶ್ ಕತ್ತಿ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಆಲಮಟ್ಟಿಗೆ ಭೇಟಿ ನೀಡಿದ್ದ ವೇಳೆ ಸಚಿವರು ಮಾಧ್ಯಮಗಳ ಮುಂದೆ ಸಿಎಂ ಆಗುವ ಇಚ್ಚೆ ಹಂಚಿಕೊಂಡರು. ನಾನು 8 ಬಾರಿ ಶಾಸಕನಾಗಿದ್ದೇನೆ. ನನಗೂ ಸಿಎಂ ಆಗುವ ಅರ್ಹತೆ ಇದೆ.ಆದ್ರೆ ಸಿಎಂ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದರು.

ಕುರ್ಚಿ ಖಾಲಿಯಾದ ಮೇಲೆ ನೋಡೋಣ. ಇನ್ನೂ ಎರಡು ವರ್ಷ ಯಡಿಯೂರಪ್ಪರವರೇ ಸಿಎಂ. ದೇವರ ಆಶೀರ್ವಾದ, ಈ ಭಾಗದ ಜನರ ಆಶೀರ್ವಾದ ಇದ್ದರೆ ಸಿಎಂ ಆಗ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ಯು.ಟಿ.ಖಾದರ್

ಕಾಂಗ್ರೆಸ್ಸಿನಲ್ಲಿ ಸಿಎಂ ಯಾರು? ಅನ್ನೋ ಚರ್ಚೆ ವಿಚಾgದ ಕುರಿತು ಮಾತನಾಡಿ, ಕಾಂಗ್ರೆಸ್ಸಿಗರು ಸಿಎಂ ಯಾರು ಅನ್ನೋ ಚರ್ಚೆ ಬಿಟ್ಟು ಮೊದಲು ಚುನಾವಣೆಯಲ್ಲಿ ಮೆಜಾರಿಟಿ ಪಡೆಯಲಿ. ಮುಂದಿನ 2 ಅವಧಿಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಈಗಲೇ ಸಿಎಂ ಚರ್ಚೆ ಮಾಡ್ತಾ ಇದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರೊಲ್ಲ ಎಂದು ಕತ್ತಿ ವ್ಯಂಗ್ಯವಾಡಿದರು.

Click to comment

Leave a Reply

Your email address will not be published. Required fields are marked *

Advertisement