Recent News

ನನ್ನವಳದ್ದು ಆತ್ಮಹತ್ಯೆಯಲ್ಲ, ಕೊಲೆ: ಯುವಕನಿಂದ ಎಫ್‍ಬಿ ಪೋಸ್ಟ್

ವಿಜಯಪುರ: ಫೇಸ್‍ಬುಕ್‍ಗೆ ಯುವತಿ ಫೋಟೋ ಹಾಕಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ದಯವಿಟ್ಟು ಕ್ಷಮಿಸಿ, ಫೇಸ್‍ಬುಕ್ ಪ್ರಚಾರದ ಸಲುವಾಗಿ ನನ್ನ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದು ಆತ್ಮಹತ್ಯೆ ಅಲ್ಲ, ಕೊಲೆ. ನನ್ನ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವಳಿಗೆ ಮನೆಯವರು ಕಿರುಕುಳ ನೀಡಿದ್ದೇ ಆಕೆಯ ಸಾವಿಗೆ ಕಾರಣವಾಗಿದೆ ಎಂದು ಆತ್ಮಹತ್ಯೆಗೆ ಶರಣಾದ ಸುಧಾರಾಣಿ ಪ್ರಿಯಕರ ಶಿವಾನಂದ ತನ್ನ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ಶಿವಾನಂದ ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾನೆ.

ಸಮಾಜದಲ್ಲಿ ಒಳ್ಳೆಯತನಕ್ಕೆ ಬೆಲೆ ಇಲ್ಲ. ಆಸ್ತಿ-ಅಂತಸ್ತಿಗಾಗಿ ಪ್ರಾಣ ತೆಗೆದು ಅದನ್ನು ಬೇರೆಯವರ ಮೇಲೆ ಹಾಕುತ್ತಾರೆ. ಇಂತಹ ಸಮಾಜದಲ್ಲಿ ಬದುಕುವುದಕ್ಕೆ ಅಸಹ್ಯವಾಗುತ್ತದೆ. ಅದಕ್ಕೆ ನಾನು ನಮ್ಮ ಹುಡುಗಿ ಸಲುವಾಗಿ ಮೇಲೆ ಹೋಗುತ್ತಿದ್ದೇನೆ. ಅಲ್ಲಿಯಾದರೂ ಅವಳು ನಾನು ನೂರು ವರ್ಷ ಬದುಕಲಿ ಎಂದು ಆಶೀರ್ವಾದ ಮಾಡಿ ಅಂತ ಶಿವಾನಂದ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಇದನ್ನೂ ಓದಿ: ಎಫ್‍ಬಿಯಲ್ಲಿ ಪ್ರಿಯಕರನಿಂದ ಸೆಲ್ಫಿ ಫೋಟೋ ಅಪ್ಲೋಡ್ – ಯುವತಿ ಆತ್ಮಹತ್ಯೆ

ಶಿವಾನಂದನ ಹೇಳಿಕೆಯಿಂದಾಗಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆದರೆ ಶಿವಾನಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಇದರಿಂದಾಗಿ ಆತನ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಇತ್ತ ಪೊಲೀಸರು ಕೂಡ ಶಿವಾನಂದ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Leave a Reply

Your email address will not be published. Required fields are marked *