ನವದೆಹಲಿ: ಭಾರತೀಯ ಬ್ಯಾಂಕ್ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಉಳಿಸಿಕೊಂಡು ಲಂಡನ್ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅರಮನೆಯಲ್ಲಿ ಚಿನ್ನದ ಟಾಯ್ಲೆಟ್ ಇರುವುದಾಗಿ ಲೇಖಕರೊಬ್ಬರು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೇಖಕ ಜೇಮ್ಸ್ ಕ್ರ್ಯಾಬ್ ಟ್ರೀ ಎಂಬವರು ಕುತೂಹಲಕರ ಸಂಗತಿಯನ್ನು ಹಂಚಿಕೊಂಡಿದ್ದು, ಒಮ್ಮೆ ವಿಜಯ್ ಮಲ್ಯರ ಲಂಡನ್ ಅರಮನೆಗೆ ತೆರಳಿದ್ದ ವೇಳೆ ಟಾಯ್ಲೆಟ್ ನಲ್ಲಿ ಚಿನ್ನಡ ಕಾಮೋಡ್ ಬಳಕೆ ಮಾಡಿದ್ದರ ಅನುಭವವನ್ನು ಹೇಳಿದ್ದಾರೆ.
Advertisement
This whole golden toilet seat story from chapter 2 of the Billionaire Raj is taking on a weird little life of its own….. Pondering ordering one myself. pic.twitter.com/TQdMmtNmGm
— james crabtree (@jamescrabtree) August 12, 2018
Advertisement
ಲಂಡನ್ ನಲ್ಲಿರುವ ವಿಜಯ್ ಮಲ್ಯ ನಿವಾಸಕ್ಕೆ ಭೇಟಿ ನೀಡಿದ್ದ ವೇ¼ ನಾಲ್ಕು ಗಂಟೆ ಅವರ ಜೊತೆಗಿದ್ದೆ. ನಾನು ಅಂದು ಮೊನಾಕೋಗೆ ತೆರಳಬೇಕಿತ್ತು. ಆದರೆ ಅದು ಸಾಧ್ಯವಾದೆ ಅರಮನೆಗೆ ಹೋಗಿದ್ದೆ. ಅಲ್ಲಿ ಎಲ್ಲರಂತೆ ಟಿವಿಯಲ್ಲಿ ನೋಡಬೇಕು ಎಂದು ನನ್ನ ಬೇಸರವಾಗಿತ್ತು. ಈ ವೇಳೆ ನಾನು ಮಲ್ಯ ಬಳಿ ಅಲ್ಲಿನ ಟಾಯ್ಲೆಟ್ ಬಳಸಬಹುದೇ ಎಂದು ಕೇಳಿದ್ದೆ. ಅದರಂತೆ ನಾನು ಒಳಗೆ ತೆರಳಿದಾಗ ಚಿನ್ನದ ರಿಮ್ ಮತ್ತು ಟಾಪ್ ಹೊಂದಿರುವ ಕಮೋಡ್ ನೋಡಿದ್ದೆ ಎಂದು ಹೇಳಿದ್ದಾರೆ.
Advertisement
ಇದೇ ವೇಳೆ ಮಲ್ಯ ಅವರ ಟಾಯ್ಲೆಟ್ ನಲ್ಲಿ ಚಿನ್ನದ ಕಮೋಡ್ ಮಾತ್ರವಿತ್ತು, ಆದರೆ ಚಿನ್ನದ ಟಾಯ್ಲೆಟ್ ಪೇಪರ್ ಇರಲಿಲ್ಲ. ಆ ಜಾಗದಲ್ಲಿ ಬಿಳಿ ಟವೆಲ್ ಇತ್ತು. ಆ ಬಳಿಕ ಶೌಚಾಲಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುವುದು ನನಗೆ ತಿಳಿಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್
Advertisement
ಅಂದಹಾಗೇ ಜೇಮ್ಸ್ ಕ್ರ್ಯಾಬ್ ಟ್ರೀ ಪ್ರಸಿದ್ಧ ಲೇಖಕರಾಗಿದ್ದು, ದಿ ಬಿಲಿಯನೇರ್ ರಾಜ್ ಪುಸ್ತಕವನ್ನು ಬರೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews