Sunday, 15th September 2019

ಫೈಟ್ ಶೂಟಿಂಗ್ ವೇಳೆ ಗಾಯಗೊಂಡ ವಿಜಯ್ ದೇವರಕೊಂಡ

ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಫೈಟಿಂಗ್ ದೃಶ್ಯ ಚಿತ್ರೀಕರಿಸುವ ವೇಳೆ ಗಾಯಗೊಂಡಿದ್ದಾರೆ.

ವಿಜಯ್ ಆಂಧ್ರದ ಕಾಕಿನಾಡಿನಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದರು. ಮೂರು ವಾರಗಳ ಕಾಲ ಈ ಚಿತ್ರದ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಆದರೆ ಈಗ ವಿಜಯ್ ಸಾಹಸ ದೃಶ್ಯ ಚಿತ್ರೀಕರಿಸುವಾಗ ಗಾಯಗೊಂಡಿದ್ದು, ವೈದ್ಯರು ಒಂದು ದಿನ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ.

ವಿಜಯ್ ಅವರು ಸ್ವತಃ ತಮಗೆ ಗಾಯಗೊಂಡಿರುವ ವಿಷಯವನ್ನು ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ವಿಜಯ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ “ನಿಮ್ಮ ಗಾಯಗಳನ್ನು ನೀವೇ ಆಚರಿಸಿಕೊಳ್ಳಿ. ಏಕೆಂದರೆ ಜೀವನದಲ್ಲಿ ಯಾವುದು ಸುಲಭವಾಗಿ ಸಿಗುವುದಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಶ್ಮಿಕಾಗೆ ಚೈಲ್ಡ್ ನಟಿ ಎಂದ ವಿಜಯ್ ದೇವರಕೊಂಡ

 

View this post on Instagram

 

Celebrate your Bruises! Because In life nothing comes easy.

A post shared by Vijay Deverakonda (@thedeverakonda) on

ಡಿಯರ್ ಕಾಮ್ರೆಡ್ ಚಿತ್ರವನ್ನು ಭರತ್ ಕಮ್ಮ ನಿರ್ದೇಶನ ಮಾಡುತ್ತಿದ್ದು, ಯಶ್ ರಂಗಿನೇನಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್‍ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಗೀತಾ ಗೋವಿಂದಂ ಚಿತ್ರದ ಯಶಸ್ಸಿನ ನಂತರ ವಿಜಯ್ ಹಾಗೂ ರಶ್ಮಿಕಾ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *