Connect with us

Cinema

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಯನತಾರಾ- ಫೋಟೋ ವೈರಲ್

Published

on

ಚೆನ್ನೈ: ಬಹುಭಾಷಾ ನಟಿ ನಯನತಾರಾ ಹಾಗೂ ವಿಗ್ನೇಶ್ ಶಿವನ್ ಪ್ರೀತಿಯಲ್ಲಿರುವುದು ಹೊಸ ವಿಚಾರವೇನಲ್ಲ. ಆದರೆ ಇದೀಗ ಮತ್ತೊಂದು ಅಚ್ಚರಿಯ ವಿಷಯ ಹೊರ ಬಿದ್ದಿದ್ದು, ಈ ಜೋಡಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆಯಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ನಟ ವಿಗ್ನೇಶ್ ಶಿವನ್ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ನಯನತಾರಾ ಅವರ ಬೆರಳಿನಲ್ಲಿರುವ ಉಂಗುರುವನ್ನು ತೋರಿಸಿದ್ದಾರೆ. ಫೋಟೋ ಹಾಕುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಯನತಾರಾ ಹಾಗೂ ವಿಗ್ನೇಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಫೋಟೋದಲ್ಲಿ ವಿಗ್ನೇಶ್ ಎದೆಯ ಮೇಲೆ ನಯನತಾರಾ ಕೈಯಿಟ್ಟಿದ್ದು, ಉಂಗುರ ಸ್ಪಷ್ಟವಾಗಿ ಕಾಣಿಸುತ್ತದೆ. ಉಂಗುರ ಹೈಲೇಟ್ ಆಗಲೆಂದೇ ವಿಗ್ನೇಶ್ ಶಿವನ್ ಈ ಫೋಟೋ ಹಾಕಿದ್ದಾರೆ ಎಂದು ಹಲವರು ಚರ್ಚೆ ನಡೆಸಿದ್ದಾರೆ. ಅಲ್ಲದೆ ಈ ಪೋಸ್ಟ್ ಗೆ ರೊಮ್ಯಾಂಟಿಕ್ ಹಾಡಿನ ಸಾಲುಗಳನ್ನು ಬರೆದಿರುವ ವಿಗ್ನೇಶ್, ‘ವಿರಲೋದು ಉಯಿರ್ ಕೂಡ ಕೊರ್ಥು….’ ಎಂದು ಬರೆದು ಹಾರ್ಟ್ ಹಾಗೂ ಹಾರ್ಟ್ ಐ ಎಮೋಜಿಗಳನ್ನು ಹಾಕಿದ್ದಾರೆ.

 

View this post on Instagram

 

A post shared by Vignesh Shivan (@wikkiofficial)

ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಮೆಂಟ್ ಮಾಡಲು ಶುರು ಮಾಡಿದ್ದು, ಎಂಗೇಜ್ ಆಗಿದ್ದೀರಾ ಎಂದು ಪ್ರಶ್ನಿಸಲು ಶುರು ಮಾಡಿದ್ದಾರೆ. ಓ ಮೈ ಗಾಡ್ ಮೀಸ್ಟರ್ ಆ್ಯಂಡ್ ಮಿಸಸ್ ವಿಕಿ ಎಂದು ಒಬ್ಬ ಅಭಿಮಾನಿ ಕಮೆಂಟ್ ಮಾಡಿದ್ದು, ಮತ್ತೊಬ್ಬರು ಸ್ಟೇ ಹ್ಯಾಪಿ ಆಲ್‍ವೇಸ್ ಎಂದು ಶುಭ ಹಾರೈಸಿದ್ದಾರೆ. ಹೀಗೆ ಹಲವು ರೀತಿಯಲ್ಲಿ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಒಟ್ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಸಖತ್ ಸದ್ದು ಮಾಡುತ್ತಿದೆ.

2015 ರಿಂದಲೂ ವಿಗ್ನೇಶ್ ಶಿವನ್ ಹಾಗೂ ನಯನತಾರಾ ಡೇಟಿಂಗ್‍ನಲ್ಲಿದ್ದು, ‘ನಾನುಂ ರೌಡಿ ಧಾನ್’ ಸಿನಿಮಾ ಶೂಟಿಂಗ್ ವೇಳೆ ಸೆಟ್‍ನಲ್ಲಿ ಭೇಟಿಯಾದಾಗ ಇಬ್ಬರಿಗೂ ಪ್ರೇಮಾಂಕುರವಾಗಿದೆ. ಆಗಿನಿಂದ ಇವರಿಬ್ಬರ ವಿವಾಹದ ಕುರಿತು ಗಾಸಿಪ್, ರೂಮರ್ಸ್ ಹಬ್ಬುತ್ತಲೇ ಇವೆ. ಆದರೆ ವಿಗ್ನೇಶ್ ಆಗಲಿ, ನಯನತಾರಾ ಆಗಲಿ ಈ ಬಗ್ಗೆ ಖಚಿತಪಡಿಸಿಲ್ಲ.

ವಿಗ್ನೇಶ್ ಶಿವನ್ ಸದ್ಯ ಅವರ ಮುಂದಿನ ‘ಕಾಠುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ ನಟಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *