ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾದ ವಿದ್ವತ್‍ಗೆ ಬಿಜೆಪಿ ಕಾರ್ಯಕರ್ತನ ಪಟ್ಟ ಕಟ್ಟಿದ ಶಾ

ಮಂಗಳೂರು: ಬೆಂಗಳೂರಿನ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾದ ಯುವಕ ವಿದ್ವತ್ ಬಿಜೆಪಿ ಕಾರ್ಯಕರ್ತನೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಶಾ, ಇತ್ತೀಚೆಗೆ ಸಿದ್ದರಾಮಯ್ಯ ಅವರ ಸರ್ಕಾರ ಕೆಲವು ಹಲ್ಲೆಗಳನ್ನು ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗನ ಪ್ರಕರಣ ಇದಕ್ಕೆ ಮುಖ್ಯ ನಿದರ್ಶನವಾಗಿದೆ. ಓರ್ವ ಶಾಸಕನ ಮಗ ಅನ್ನೋದನ್ನು ಬಿಟ್ಟು ಓರ್ವ ಸಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಆತನ ಮೇಲೆ ಎಫ್‍ಐಆರ್ ದಾಖಲಿಸಿಕೊಳ್ಳಲಿಲ್ಲ. ಇದನ್ನು ಹೇಳುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾ ಹೇಳಿದ್ದಾರೆ. ಇದನ್ನೂ ಓದಿ:  ಬಿಜೆಪಿಯವರು ಸತ್ತ ಮೇಲೆ ಎಲ್ಲರನ್ನೂ ಪಕ್ಷಕ್ಕೆ ಸೇರಿಸುತ್ತಾರೆ: ರಾಮಲಿಂಗಾ ರೆಡ್ಡಿ ವ್ಯಂಗ್ಯ

ವಿದ್ವತ್- ಹಲ್ಲೆಗೊಳಗಾದ ಯುವಕ. 

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಮುಕ್ತವನ್ನಾಗಿ ಮಾಡುತ್ತೇವೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮುಕ್ತ ಮಾಡ್ತೇವೆ. ಯಡಿಯೂರಪ್ಪ ಸರ್ಕಾರ ಬಂದ್ರೆ ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕ್ತೇವೆ ಅಂತ ಹೇಳಿದ್ರು. ಇದೇ  ವೇಳೆ ಸಮಾವೇಶದ ಮುಂಭಾಗದಲ್ಲಿ ಆಸೀನರಾಗಿದ್ದ ಬಂಟ್ವಾಳದ ಬಿಜೆಪಿ ಕಾರ್ಯಕರ್ತ ಶರತ್ ಮಡಿವಾಳ ಅವರ ಹೆತ್ತವರನ್ನು ಶಾ ಭೇಟಿ ಮಾಡಿ, ಸಾಂತ್ವಾನ ಹೇಳಿದ್ರು.  ಇದನ್ನೂ ಓದಿ: ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

ಬಿಜೆಪಿ ಕಾರ್ಯಕರ್ತನಲ್ಲ: ಅಮಿತ್ ಶಾ ಹೇಳಿಕೆ ಸಂಬಂಧ ಮಾಜಿ ಡಿಸಿಎಂ ಆರ್. ಅಶೋಕ್ ಪ್ರತಿಕ್ರಿಯಿಸಿ ವಿದ್ವತ್ ಬಿಜೆಪಿ ಕಾರ್ಯಕರ್ತ ಅಲ್ಲ. ರಾಷ್ಟ್ರೀಯ ಅಧ್ಯಕ್ಷರು ಭಾಷಣ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದಾರೆ. ಇದಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಸ್ಪಷ್ಟೀಕರಣ ಕೊಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

 

 

 

Leave a Reply

Your email address will not be published. Required fields are marked *