Advertisements

ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ಸಾಧ್ಯತೆ – ಏನಿದು ಲೆಕ್ಕಾಚಾರ?

ಬೆಂಗಳೂರು: ಬಿಜೆಪಿ ಬಿ ಟೀಂ ಎಂಬ ಅಪವಾದಕ್ಕೆ ಗುರಿಯಾಗಿರುವ ಜೆಡಿಎಸ್ ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ.

Advertisements

25 ಸ್ಥಾನಗಳ ಪೈಕಿ ಕೇವಲ 7 ಸ್ಥಾನಗಳಿಗಷ್ಟೇ ಜೆಡಿಎಸ್ ಅಭ್ಯರ್ಥಿ ಘೋಷಿಸಿದೆ. ಉಳಿದ ಸ್ಥಾನಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಒಳಮೈತ್ರಿಗೆ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ನಡೆಯುವುದು  ಬಹುತೇಕ ಖಚಿತವಾಗಿದೆ.

Advertisements

ಈಗಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೈತ್ರಿಗೆ ಬಹಿರಂಗ ಆಹ್ವಾನ ನೀಡಿದ್ದು ಜೆಡಿಎಸ್ ವರಿಷ್ಠರ ಜೊತೆಗೆ ಮಾತುಕತೆಯೊಂದಷ್ಟೇ ಬಾಕಿ ಇದ್ದು, ಈ ಮಾತುಕತೆ ವೇಳೆ ಒಳಮೈತ್ರಿಗೆ ಜೆಡಿಎಸ್ ಒಪ್ಪಬಹುದು ಎನ್ನಲಾಗುತ್ತಿದೆ ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

ಯಾಕೆ ಮೈತ್ರಿ?
12 ಸ್ಥಾನ ಗೆದ್ದು ಪರಿಷತ್‍ನಲ್ಲಿ ಬಹುಮತ ಪಡೆಯಲು ಬಿಜೆಪಿ ಮುಂದಾಗಿದೆ. ಆದರೆ ಬಿಜೆಪಿಯ `ಬಹುಮತ’ ಲೆಕ್ಕಾಚಾರ ಈಡೇರಿಕೆಗೆ ಜೆಡಿಎಸ್ ಬೆಂಬಲ ಅನಿವಾರ್ಯ. ಇತ್ತ ಜುಲೈ 4ರವರೆಗೂ ಸಭಾಪತಿ ಗಾದಿ ಉಳಿಸಿಕೊಳ್ಳಲು ಜೆಡಿಎಸ್‌ ಲೆಕ್ಕಾಚಾರ ಹಾಕಿಕೊಂಡಿದೆ. ಇತರೆ ರಾಜಕೀಯ ಲಾಭಕ್ಕೂ ಬಿಜೆಪಿ ಜೊತೆಗೆ ಮೈತ್ರಿ ಮುಂದುವರಿಕೆಗೆ ಜೆಡಿಎಸ್ ಆಲೋಚನೆ ಮಾಡಿದೆ ಎನ್ನಲಾಗಿದೆ. ಇದನ್ನೂ ಓದಿ: ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು?

Advertisements

ಮೈತ್ರಿ ಮಾಡಿದ್ರೆ ತಪ್ಪೇನು?
ಮೈತ್ರಿ ವಿಚಾರವಾಗಿ ಸೋಮವಾರ ಪ್ರತಿಕ್ರಿಯೆ ನೀಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಜೆಡಿಎಸ್‌ ಜೊತೆಗಿನ ಮೈತ್ರಿ ವಿಚಾರವಾಗಿ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಏನು ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ರಾಜಕೀಯ ನಿಂತ ನೀರಲ್ಲ. ರಾಜಕೀಯದಲ್ಲಿ ಯಾರೂ ಶತ್ರು ಅಲ್ಲ ಮಿತ್ರರೂ ಅಲ್ಲ. ಕೆಲವು ಕಡೆ ಜೆಡಿಎಸ್ ಬೆಂಬಲ ಕೊಡಬಹುದು. ಜೆಡಿಎಸ್‌ನವರು ಅವರಾಗಿಯೇ ಬಂದು ಬೆಂಬಲ ನೀಡುವಾಗ ಮೈತ್ರಿ ಮಾಡಿಕೊಂಡರೆ ತಪ್ಪೇನು? ಅವರು ಸ್ಪರ್ಧೆ ಮಾಡದ ಕಡೆ ಬೆಂಬಲ ಪಡೆದರೆ ತಪ್ಪಿಲ್ಲ ಎಂದು ಹೇಳುವ ಮೂಲಕ ಮೈತ್ರಿ ವಿಚಾರವನ್ನು ಸಮರ್ಥಿಸಿಕೊಂಡಿದ್ದರು.

Advertisements
Exit mobile version