Connect with us

Crime

ರೇಪ್ ಕೇಸ್ ದಾಖಲಿಸಲು 800 ಕಿ.ಮೀ ಪ್ರಯಾಣ ಮಾಡಿದ ಯುವತಿ

Published

on

– ದುಬೈನಿಂದ ಬಂದು ಹೋಟೆಲಿನಲ್ಲಿ ಅತ್ಯಾಚಾರ
– ಮತ್ತೆ ಸ್ನೇಹಿತೆಯ ಮನೆಗೆ ಕರ್ಕೊಂಡು ಹೋಗಿ ರೇಪ್

ಮುಂಬೈ: 22 ವರ್ಷದ ನೇಪಾಳಿ ಯುವತಿಯೊಬ್ಬಳು ಮಹಾರಾಷ್ಟ್ರದ ನಾಗ್ಪುರದಲ್ಲಿ ಅತ್ಯಾಚಾರ ಆರೋಪಿಯ ವಿರುದ್ಧ ಕೇಸ್ ದಾಖಲಿಸಲು ಲಕ್ನೋದಿಂದ ಪ್ರಯಾಣ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಲಕ್ನೋದಲ್ಲಿ ನಡೆದಿದ್ದು, ಆರೋಪಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಬಾರದು ಎಂದು ಬೆದರಿಕೆ ಹಾಕಿದ್ದನು. ಹೀಗಾಗಿ ಸಂತ್ರಸ್ತೆ ಲಕ್ನೋದಿಂದ 800 ಕಿ.ಮೀ ದೂರ ಪ್ರಯಾಣ ಮಾಡಿ ನಾಗ್ಪುರದ ಕೊರಡಿ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‍ಐಆರ್ ದಾಖಲಿಸಿದ್ದಾರೆ. ಯಾವುದೇ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‍ಐಆರ್ ಸಲ್ಲಿಸಬಹುದು. ನಂತರ ಅದನ್ನು ಘಟನೆ ನಡೆದ ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಗೆ ವರ್ಗಾಯಿಸಬಹುದು.

ಏನಿದು ಪ್ರಕರಣ:
ಸಂತ್ರಸ್ತೆ ಉದ್ಯೋಗಕ್ಕಾಗಿ 2018ರಲ್ಲಿ ನೇಪಾಳದಿಂದ ಭಾರತಕ್ಕೆ ಬಂದಿದ್ದಳು. ಇದೇ ವರ್ಷದ ಮಾರ್ಚ್ ವರೆಗೂ ಲಕ್ನೋದ ಫೈಜಾಬಾದ್ ರಸ್ತೆಯಲ್ಲಿರುವ ಬಾಡಿಗೆ ಫ್ಲ್ಯಾಟ್‍ನಲ್ಲಿ ಸ್ನೇಹಿತೆಯ ಜೊತೆ ವಾಸಿಸುತ್ತಿದ್ದಳು. ಸ್ನೇಹಿತೆ ದುಬೈನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಲಕ್ನೋ ಮೂಲದ ಆರೋಪಿ ಪ್ರವೀಣ್ ಯಾದವ್‍ನನ್ನು ಸಂತ್ರಸ್ತೆಗೆ ವಿಡಿಯೋ ಕಾಲ್ ಮೂಲಕ ಪರಿಚಯಿಸಿದ್ದನು. ನಂತರ ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡಿದ್ದರು ಎಂದು ಇನ್ಸ್ ಪೆಕ್ಟರ್ ವಜೀರ್ ಶೇಖ್ ತಿಳಿಸಿದ್ದಾರೆ.

ನನ್ನ ಸ್ನೇಹಿತೆ 1.5 ಲಕ್ಷ ಹಣವನ್ನು ಇಟ್ಟುಕೊಂಡಿದ್ದಳು. ಹಣವನ್ನು ಹಿಂದಿರುಗಿಸುವಂತೆ ನಾನು ಕೇಳಿದೆ. ಆದರೆ ಆಕೆ ಹಣವನ್ನು ಹಿಂದಿರುಗಿಸಲಿಲ್ಲ, ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಳು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಈ ಬಗ್ಗೆ ಸಂತ್ರಸ್ತೆ ಪ್ರವೀಣ್ ಯಾದವ್‍ಗೆ ದೂರು ನೀಡಿದ್ದಾಳೆ. ಒಂದೆರಡು ದಿನಗಳ ನಂತರ ಆರೋಪಿ ದುಬೈನಿಂದ ಲಕ್ನೋಗೆ ಬಂದಿದ್ದಾನೆ. ನಂತರ ಹೋಟೆಲ್‍ವೊಂದರಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾನೆ. ಈ ವೇಳೆ ಆರೋಪಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಕೃತ್ಯದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಸಂತ್ರಸ್ತೆಯನ್ನು ಸ್ನೇಹಿತೆಯ ಮನೆಗೆ ಕರೆದುಕೊಂಡು ಹೋಗಿದ್ದು, ಮತ್ತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾನೆ.

ಒಂದು ವೇಳೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗ ಸಂತ್ರಸ್ತೆ ಲಕ್ನೋದಿಂದ ತಪ್ಪಿಸಿಕೊಂಡು ಸೆಪ್ಟೆಂಬರ್ 30 ರಂದು ನಾಗ್ಪುರದ ನೇಪಾಳದ ಸ್ನೇಹಿತನ ಮನೆಗೆ ಬಂದಿದ್ದಾಳೆ. ಇಲ್ಲಿ ಕೊರಡಿ ಪೊಲೀಸ್ ಠಾಣೆಗೆ ತೆರಳಿ ಯಾದವ್ ಮತ್ತು ಲಕ್ನೋ ಮೂಲದ ಸಂತ್ರಸ್ತೆಯ ಸ್ನೇಹಿತೆಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಶೂನ್ಯ ಎಫ್‍ಐಆರ್ ದಾಖಲಿಸಿದ್ದಾರೆ. ಸದ್ಯಕ್ಕೆ ಈ ದೂರನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಹಿಸುವ ತಯಾರಿ ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *