Connect with us

Bengaluru City

ನರ್ಸ್ ಗಳಿಗೆ ನಿಂದನೆ ಪ್ರಕರಣ- ಸ್ಪಷ್ಟನೆ ನೀಡಿದ್ರು ವಿಕ್ಟೋರಿಯಾ ವಿಶೇಷಾಧಿಕಾರಿ

Published

on

ಬೆಂಗಳೂರು: ನರ್ಸ್ ಗಳಿಗೆ ಅಶ್ಲೀಲವಾಗಿ ನಿಂದಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ವಿಶೇಷಾಧಿಕಾರಿ ಬಾಲಾಜಿ ಪೈ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವೈದ್ಯರೊಬ್ಬರು ಬಂದು ರೆಕಾರ್ಡ್ ಕೇಳಿದ್ದಾರೆ ಅಂತ ನನ್ನ ಬಳಿ ದೂರು ಕೊಟ್ಟರು. ಈ ವೇಳೆ ನಾನು ಲಿಖಿತ ದೂರು ನೀಡಿ ಅಂತ ಹೇಳಿದ್ದೆ. ಆದ್ರೆ ಅವರು ನನ್ನ ಜೊತೆ ಉಲ್ಟಾ ಮಾತಾಡಿದ್ರು. ಆದ್ರೆ ಸಚಿವರ ಹೆಸರನ್ನು ಪ್ರಸ್ತಾಪವೇ ಮಾಡಿಲ್ಲ. ಅಷ್ಟೊಂದು ತಿಳಿಯದ ದಡ್ಡ ನಾನಲ್ಲ. ಇದೀಗ ಈ ವಿಚಾರ ನನಗೆ ಇರುಸುಮುರುಸು ತಂದಿದೆ ಅಂತ ಹೇಳಿದ್ರು.

ಘಟನೆ ಬಗ್ಗೆ ಅವರನ್ನೇ ತನಿಖೆ ನಡೆಸಲಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ಅವರಿಗೆ ಬೈದಿಲ್ಲ. ಬದಲಾಗಿ ನಾನೇ ನಿಮಗೆ ಬೆಂಬಲ ಕೊಡುತ್ತೇನೆ. ಈ ಬಗ್ಗೆ ನೀವು ಚಿಂತೆ ಮಾಡಬೇಡಿ. ಏನಾದ್ರೂ ನಾನಿದ್ದೇನೆ ಅಂತ ಹೇಳಿದ್ದೆ. ಆದ್ರೆ ನರ್ಸ್ ಯಾಕೆ ನನ್ನ ವಿರುದ್ಧ ಡೀನ್ ಗೆ ದೂರು ನೀಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಈ ಬಗ್ಗೆ ನನಗೇನೂ ಗೊತ್ತಿಲ್ಲ ಅಂತ ಅವರು ಹೇಳಿದ್ರು.

ಏನಿದು ಆರೋಪ?:
ರೆಕಾರ್ಡ್ ನಿರ್ವಹಿಸುವ ವಿಚಾರದಲ್ಲಿ ಜಗಳವಾಗಿದೆ. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಡೀನ್ ಗೆ ರೆಕಾರ್ಡ್ ಕೊಡುವುದು ಆಕೆಯ ಜವಾಬ್ದಾರಿಯಾಗಿತ್ತು. ಹಾಗೆಯೇ ಆಕೆ ಅದನ್ನು ಡೀನ್ ಗೆ ಕೊಟ್ಟಿದ್ದಾರೆ. ಆದ್ರೆ ಬಾಲಾಜಿ ಅವರ ಗಮನಕ್ಕೆ ತಾರದೇ ಕೊಟ್ಟಿದ್ದಕ್ಕೆ ಪೈ ನರ್ಸ್ ಅನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗಿತ್ತು.

ಏನಮ್ಮ ಅವರು ಕೇಳಿದ್ದನ್ನೆಲ್ಲಾ ಕೋಡೋಕೆ ನಿಮಗೆ ನಾಚಿಕೆ ಆಗಲ್ವಾ. ನಾಳೆ ಸಚಿವ ಡಿಕೆ ಶಿವಕುಮಾರ್ ಬಂದು ಬಾಲಾಜಿ ಎರಡು ಸ್ಟಾಫ್ ನರ್ಸ್‍ಗಳನ್ನು ರೇಪ್ ಮಾಡು ಅಂತಾರೆ. ಆಗ ನೀವು ರೇಪ್ ಮಾಡಿಸಿಕೊಳ್ಳಲು ರೆಡಿ ಇರ್ತೀರಾ? ಯಾಕಂದ್ರೆ ಮಂತ್ರಿಗಳಲ್ವಾ ಅವರು. ಹೀಗಾಗಿ ಅವರು ಹೇಳಿದಾಗ ನೀವು ರೆಪ್ಯೂಸ್ ಮಾಡಂಗಿಲ್ಲ ಅಂತ ಪೈ ನಿಂದಿಸಿದ್ದಾರೆ ಅಂತ ನರ್ಸ್ ಗಳು ಆರೋಪಿಸಿದ್ದರು. ಅಲ್ಲದೇ ಬಾಲಾಜಿ ಪೈ ವಿರುದ್ಧ ಟ್ರಾಮಾ ಸೆಂಟರ್‍ನ ಸ್ಟಾಫ್ ನರ್ಸ್, ಬಿಎಂಸಿ ಡೀನ್‍ಗೆ ದೂರು ನೀಡಿದ್ದರು. 20ಕ್ಕೂ ಹೆಚ್ಚು ಸ್ಟಾಫ್ ನರ್ಸ್‍ಗಳು ನೀಡಿದ ಲಿಖಿತ ದೂರಿನ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.