Bengaluru City
ವಿಹಿಂಪದ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ ನಿಧನ

ಬೆಂಗಳೂರು: ವಿಶ್ವ ಹಿಂದೂ ಪರಿಷದ್ನ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ(96)ಯವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಇವರು ವಿಶ್ವ ಹಿಂದೂ ಪರಿಷತ್ನ ಪೂರ್ವ ಅಖಿಲ ಭಾರತೀಯ ಕಾರ್ಯದರ್ಶಿ, ಪೂರ್ವ ಏಕಲ ವಿದ್ಯಾಲಯ ಪ್ರಭಾರಿ, ಶ್ರೀ ರಾಮ ಜನ್ಮ ಭೂಮಿ ಆಂದೋಲನ ನೇತೃತ್ವ ವಹಿಸಿದ್ದರು. ಇದೀಗ ದೇಸಾಯಿ ಅವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಹಿರಿಯ ಪ್ರಚಾರಕರಾದ ವಿಶ್ವ ಹಿಂದೂ ಪರಿಷದ್ನ ಬಾಬುರಾವ್ ದೇಸಾಯಿಯವರು ಶುಕ್ರವಾರ ರಾತ್ರಿ ಪರಂಧಾಮ ಸೇರಿದರು ಎಂದು ತಿಳಿಸಲು ಅತೀವ ದುಃಖವಾಗುತ್ತಿದೆ. ಸದ್ಯ ಧರ್ಮಶ್ರೀಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶ್ವ ಹಿಂದೂ ಪರಿಷದ್ ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಿದೆ.
ಇಂದು ಸಂಜೆ 3 ಗಂಟೆಗೆ ಬೆಂಗಳೂರು ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಇರುತ್ತದೆ ಎಂದು ಪರಿಷದ್ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ.
