Tuesday, 22nd October 2019

Recent News

ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ವಿಚಾರದಲ್ಲಿ ನನಗಿಂತ ದೊಡ್ಡವರಾಗಿದ್ದರು: ಜೀವದ ಗೆಳೆಯನಿಗೆ ಶ್ರೀನಾಥ್ ಕಂಬನಿ

ಬೆಂಗಳೂರು: ಅನಂತ್ ಜೀಗೆ ನಮಸ್ಕಾರ ಮಾಡಲು ನಾನು ಬರಬೇಕಿತ್ತಾ? ಎಂದು ಹೇಳುತ್ತಾ ಹಿರಿಯ ನಟ ಶ್ರೀನಾಥ್ ಅವರು ಕೇಂದ್ರ ಸಚಿವ ಅನಂತ್‍ಕುಮಾರ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಅನಂತ್ ಜೀಗೆ ನಮಸ್ಕಾರ ಮಾಡಲು ನಾನು ಬರಬೇಕಿತ್ತಾ? ಎಂಬುದು ನನಗೆ ಕಾಡುತ್ತಿದೆ. ಅವರು ನನಗಿಂತ ಚಿಕ್ಕ ವಯಸ್ಸಿನವರು. 96ನೇ ಇಸವಿನಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನನಗೆ ಅವರ ಪರಿಚಯವಾಯಿತು. ನಮ್ಮಿಬ್ಬರ ಪರಿಚಯ ಸ್ನೇಹವಾಯಿತು. ಸ್ನೇಹಿತನಾಗಿ ಅವರು ನನಗೆ ಜೀವದ ಗೆಳೆಯಾಗಿದ್ದರು. ನನಗೆ ಮಾರ್ಗದರ್ಶಕರಾಗಿದ್ದರು. ಬಿಜೆಪಿ ಬರಲು ಹಾಗೂ ಅಲ್ಲಿ ನಾನು ಸಕ್ರಿಯರಾಗಿರಲು ಅವರು ನನಗೆ ಪ್ರೋತ್ಸಾಹ ನೀಡುತ್ತಿದ್ದರು.

ಅನಂತ್ ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದರು ಅವರು ನನಗೆ ಎಲ್ಲ ವಿಷಯದಲ್ಲಿ ಅವರು ನನಗಿಂತ ದೊಡ್ಡವರಾಗಿದ್ದರು. ಯಾವ ವಿಷಯದಲ್ಲಿ ಹೇಗೆ ಯೋಚನೆ ಮಾಡಬೇಕೆಂದು ಹೇಳುತ್ತಿದ್ದರು. ಅನೇಕ ವಿಷಯಗಳಲ್ಲಿ ಅವರು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ಮಾರ್ಗದರ್ಶಕ ಅವರು ನನ್ನ ಕೊನೆಯುಸಿರು ಇರುವರೆಗೂ ನನ್ನ ಜೊತೆ ಅವರು ಇರುತ್ತಾರೆ ಎಂದು ನಾನು ಅಂದುಕೊಂಡಿದೆ. ಆದರೆ ಈಗ ಅವರು ನಮ್ಮನೆಲ್ಲಾ ಅಗಲಿ ಹೋಗಿರೋದು ನನಗೆ ನೋವಾಗುತ್ತಿದೆ.

ಸ್ಬೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಯಾವತ್ತು ನಾವು ಪಯಣಿಗನಾಗಿರಬೇಕೆಂಬುದು ಅವರನ್ನು ನೋಡಿದ್ದಾಗ ಗೊತ್ತಾಗುತ್ತದೆ. ಅನಂತ್ ಅವರು ನಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ನಾಯಕರಾಗಿದ್ದರು ಹಾಗೂ ವಿಶ್ವದಲ್ಲಿ ಹೆಸರು ಮಾಡಿದ್ದರು. ಆದರೆ ಅವರು ಸ್ನೇಹ ಜೀವಿ ಆಗಿದ್ದರು. ಸ್ನೇಹಕ್ಕೆ ಅವರು ಕೊಡುತ್ತಿದ್ದ ಬೆಲೆ ಅನೇಕರಿಗೆ ಮಾರ್ಗದರ್ಶನವಾಗಬಹುದು. ಜೀವನದಲ್ಲಿ ಏನೇ ಸಾಧಿಸಿದ್ದರು ಆದರೆ ಸ್ನೇಹ ಇದ್ದರೇ ಆ ಸಾಧನೆ ಮೆಟ್ಟಿಲು ಆಗುತ್ತಿದೆ. ಆ ಮೆಟ್ಟಿಲಲ್ಲಿ ಸ್ನೇಹದಿಂದ ತುಂಬಿದ ವಾತಾವರಣ ನಿರ್ಮಿಸಲು ಅನಕೂಲವಾಗುತ್ತೆ ಎಂಬುದನ್ನು ತೋರಿಸಿದ್ದಾರೆ. ಅವರು ನನಗೆ ಜೀವದ ಗೆಳೆಯರಾಗಿದ್ದರು ಎಂದು ಹೇಳಿ ಶ್ರೀನಾಥ್ ಕಂಬನಿ ಮಿಡಿದಿದ್ದಾರೆ.

ಅನಂತ್ ಅವರ ರಾಜಕೀಯದಲ್ಲಿ ಅವರ ನಡೆ, ನುಡಿ ನೋಡಿ ನಾನು ಅವರನ್ನು ಫಾಲೋ ಮಾಡಿದೆ. ಪಕ್ಷಾತೀತವಾಗಿ ಅನಂತ್ ಅವರು ಸ್ನೇಹವನ್ನು ಸಂಪಾದಿಸಿದ್ದರು. ರಾಜಕೀಯ, ಪಕ್ಷ ಎಂದರೆ ಟೀಕೆ, ಟಿಪ್ಪಣಿ ಇರುತ್ತದೆ. ಆದರೆ ಟೀಕೆ, ಟಿಪ್ಪಣಿ ಎಲ್ಲ ಮೀರಿ ಅನಂತ್ ಅವರನ್ನು ನಮ್ಮ ಸ್ನೇಹಿತ ಎಂದು ಹೇಳಿಕೊಳ್ಳುವುದ್ದಕ್ಕೆ ಬೇರೆ ಪಕ್ಷದ ರಾಜಕಾರಣಿಗಳಿಗೆ ಸಂತೋಷಪಡುತ್ತಾರೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *