Sunday, 21st October 2018

ಯಡಿಯೂರಪ್ಪನ ಬಾಯಿ ದೆವ್ವದ ಬಾಯಿ ಇದ್ದಂತೆ: ವೆಂಕಟರಾವ್ ನಾಡಗೌಡ

ಬೀದರ್: ಯಡಿಯೂರಪ್ಪನ ಬಾಯಿ ದೆವ್ವದ ಬಾಯಿ ಇದ್ದಂತೆ. ಇಡೀ ದೇಶಕ್ಕೆ ಆಪರೇಷನ್ ಮಾಡೋಕೆ ಬರುತ್ತೆ ಅಂತ ತೋರಿಸಿದವರೇ ಅವರು ಎಂದು ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಶು ಇಲಾಖೆ ಸಭಾಂಗಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಆಪರೇಷನ್ ಮಾಡುವುದಕ್ಕೆ ಬರುತ್ತದೆ ಎಂದು ತೋರಿಸಿದ ವ್ಯಕ್ತಿ ಯಡಿಯೂರಪ್ಪ. ನಾನು ಶಾಸಕನಾಗಿದ್ದಾಗ ಆಪರೇಷನ್ ಕಮಲ ಮಾಡಿ, ರಾಜೀನಾಮೆ ಕೊಡಿಸಿ ಮಂತ್ರಿ ಮಾಡಿದರು. ಈಗ ಅವರಿಗೆ ಆಪರೇಷನ್ ಭಯ ಶುರುವಾಗಿದೆ. ಅವರು ಕೂಡ ಮುಖ್ಯಮಂತ್ರಿ ಆಗಬೇಕು ಎಂದು ಕನಸ್ಸು ಕಾಣುತ್ತಿದ್ದಾರೆ. ಈಗಾಗಲೇ ಒಂದು ದಿನ ಮುಖ್ಯಮಂತ್ರಿ ಆಗಿದ್ದು ಆಗಿದೆ. ಆಪರೇಷನ್ ಮಾಡೋದು ಅವರಿಗೆ ಹವ್ಯಾಸವಾಗಿದೆ ಎಂದು ಕಿಡಿಕಾರಿದರು.

ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು ಬೆಂಕಿಯಲ್ಲಿ ಹೊಗೆ ಆಡೋದು ನೋಡಿದ್ದೇನೆ. ಆದರೆ ನೀವು ಬೂದಿಯಲ್ಲಿ ಹೊಗೆ ಹಾರಿಸುತ್ತಿದ್ದೀರಿ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರನ್ನು ಯಾರು ಮೂಲೆ ಗುಂಪು ಮಾಡಿಲ್ಲ. ಎಲ್ಲ ವಿಷಯವು ಅವರ ಬಳಿ ಚರ್ಚೆಯಾಗಿ ಕಾರ್ಯಕ್ಕೆ ಬರುತ್ತವೆ. ಸಿಎಂ ದಂಗೆ ಎನ್ನುವ ಪದವನ್ನು ಬೇರೆ ಅರ್ಥದಲ್ಲಿ ಬಳಸಿದ್ದಾರೆ ಎಂದು ವೆಂಕಟರಾವ್ ನಾಡಗೌಡ ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *