Wednesday, 20th February 2019

Recent News

ಅಂದು ಟೀ ಕುಡಿಯಲು ಪರದಾಡಿದ್ದ ನಟಿಯಿಂದ ಇಂದು ಸಲ್ಮಾನ್ ಖಾನ್‍ಗೆ ಹೊಗಳಿಕೆ!

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ `ವೀರ್ ಗತಿ’ ಚಿತ್ರದಲ್ಲಿ ನಟಿಸಿ ಆಗಿನ ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದ ಪೂಜಾ ದಡ್ವಾಲ್ ಆರೋಗ್ಯದಲ್ಲಿ ಈಗ ಸುಧಾರಣೆ ಕಂಡಿದೆ. ಈಗ ಸಂಪೂರ್ಣ ಗುಣವಾಗಿ ಪೂಜಾ, ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದಾರೆ.

ಟಿಬಿ ಕಾಯಿಲೆಯಿಂದ ಬಳುತ್ತಿದ್ದ ಪೂಜಾ ದದ್ವಾಲ್ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಸಲ್ಮಾನ್ ಖಾನ್ ಅವರ ಸಹಾಯದ ಮೊರೆ ಹೋಗಿದ್ದರು. ಪೂಜಾ ಕಷ್ಟಕ್ಕೆ ಸ್ಪಂದಿಸಿದ ಸಲ್ಮಾನ್ ತನ್ನ ಸಂಸ್ಥೆಯ ಮೂಲಕ ಪೂಜಾ ಅವರಿಗೆ ಹಣ ಹಾಗೂ ಬೇರೆ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದರು.

ಮಾರ್ಚ್ ತಿಂಗಳಲ್ಲಿ ಪೂಜಾ ಆಸ್ಪತ್ರೆಗೆ ದಾಖಲಾದಾಗ ಅವರು ಕೇವಲ 23 ಕೆ.ಜಿ ತೂಕವಿದ್ದರು. ಆದರೆ ಈಗ ಕಾಯಿಲೆಯಿಂದ ಗುಣವಾಗಿದ್ದು 20 ಕೆಜೆ ತೂಕ ಹೆಚ್ಚಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಗುಣವಾದ ಪೂಜಾ ಈಗ ಗೋವಾಗೆ ತೆರೆಳುತ್ತಿದ್ದಾರೆ. ಅಲ್ಲದೇ ತನಗೆ ಸಹಾಯ ಮಾಡಿದ್ದಕ್ಕೆ ಸಲ್ಮಾನ್ ಖಾನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!

ಸಲ್ಮಾನ್ ಬಗ್ಗೆ ಹೇಳಿದ್ದು ಹೀಗೆ
ನನಗೆ ಹೇಗೆ ಅನುಭವ ಆಗುತ್ತಿದೆ ಎಂಬುದು ನಾನು ವಿವರಿಸಲು ಸಾಧ್ಯವಿಲ್ಲ. ಮಾರ್ಚ್ 2ರಂದು ನಾನು ಆಸ್ಪತ್ರೆಗೆ ದಾಖಲಾಗಿದ್ದಾಗ ಖಿನ್ನತೆಯ ವಾರ್ಡ್‍ನ ಕಾರ್ನರ್‍ನಲ್ಲಿ ಇದಿದ್ದನ್ನು ನೋಡಿ ನಾನು ಬದುಕುವುದಿಲ್ಲ ಎಂದು ನನಗೆ ಅನಿಸುತ್ತಿತ್ತು. ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನನ್ನು ಬೀದಿ ಪಾಲು ಮಾಡಿದ್ದರು. ಅಲ್ಲದೇ ವೈದ್ಯರು ನನ್ನ ಶ್ವಾಸಕೋಶದಲ್ಲಿ ಸಮಸ್ಯೆಯಿದೆ ಎಂದು ಹೇಳಿದ್ದಾಗ ನಾನು ಸಂಪೂರ್ಣ ಭರವಸೆ ಕಳೆದುಕೊಂಡೆ. ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ನನ್ನ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ನಾನು ಅಲ್ಲಿ ನನ್ನಂತಹ ಬಹಳ ಜನರನ್ನು ನೋಡಿದೆ. ಅವರ ಕುಟುಂಬದವರು ಅವರನ್ನು ಬೀದಿ ಪಾಲು ಮಾಡಿದ್ದರು. ಆಗ ನಾನು ಸಾಯಬಾರದು, ಬದುಕಬೇಕೆಂದು ನಿರ್ಧರಿಸಿದೆ. ಇದನ್ನೂ ಓದಿ: ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

ನಾನು ಬದುಕಬೇಕು ಹಾಗೂ ನನ್ನ ಕಾಯಿಲೆ ವಿರುದ್ಧ ಹೋರಾಡಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ನಾನು ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಸಲ್ಮಾನ್ ಖಾನ್ ಅವರು ನನಗೆ ಸಹಾಯ ಮಾಡಿದ್ದಕ್ಕೆ ನಾನು ಅವರಿಗೆ ಚಿರಋಣಿಯಾಗಿರುತ್ತೇನೆ. ನನಗೆ ಬಟ್ಟೆ, ಸೋಪ್, ಡೈಪರ್, ಆಹಾರ, ಔಷಧಿಗಳಿಗೆ ಅವರ ಸಂಸ್ಥೆ ನೋಡಿಕೊಂಡಿದೆ. ನಾನು ಈಗ ಬದುಕಿದ್ದೇನೆ ಎಂದರೆ ಅದು ಸಲ್ಮಾನ್ ಖಾನ್ ಅವರಿಂದಾಗಿ ಎಂದು ಪೂಜಾ ತಿಳಿಸಿದ್ದಾರೆ. ಇದನ್ನೂ ಓದಿ: ಟೀ ಕುಡಿಯಲು ಪರದಾಡ್ತಿದ್ದ ನಟಿಯ ವಿಡಿಯೋಗೆ ಕೊನೆಗೂ ಪ್ರತಿಕ್ರಿಯಿಸಿದ ಸಲ್ಮಾನ್!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply

Your email address will not be published. Required fields are marked *