Connect with us

Districts

ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್ – ನಾಲ್ವರ ಬಂಧನ

Published

on

– ಗೋವಾ ಪ್ರವಾಸದಲ್ಲಿ ಅಪಹರಣಕಾರರು

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣಕ್ಕೆ ಸಂಬಂಧಿಸಿದಂಯೆ ಕೋಲಾರ ಪೊಲೀಸರು ಬೆಂಗಳೂರು ಮೂಲದ ನಾಲ್ವರನ್ನ ಬಂಧಿಸಿದ್ದಾರೆ. ಕೆಲ ಆರೋಪಿಗಳ ಅಪಹರಣದಲ್ಲಿ ಸಿಕ್ಕ ಹಣದಿಂದ ಗೋವಾ ಕಡೆ ಟೂರ್ ನಲ್ಲಿರುವ ವಿಷಯ ಬೆಳಕಿಗೆ ಬಂದಿದೆ.

ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಕೋಲಾರ ಪೊಲೀಸರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಿಂದ ಪ್ರಕರಣ ವರ್ಗಾವಣೆಯಾದ ಬಳಿಕ ಸತತ ನಾಲ್ಕು ತಂಡಗಳಾಗಿ ಅಪಹರಣಕಾರರಿಗಾಗಿ ಬಲೆ ಬೀಸಿರುವ ಪೊಲಿಸರಿಗೆ ಎಲ್ಲಾ ಆರೋಪಿಗಳು ಸುಳಿವು ಸಿಕ್ಕಿದೆ. ಆದ್ರೆ ಅಪಹರಣದ ಕಿಂಗ್‍ಪಿನ್ ಎನ್ನಲಾದ ಪ್ರಮುಖ ಆರೋಪಿ ತಮಿಳುನಾಡಿನ ಹೊಸುರು ಮೂಲದ ಕವಿರಾಜ್ ಗಾಗಿ ತೀವ್ರ ಶೋಧಕಾರ್ಯ ನಡಯುತ್ತಿದೆ. ಸದ್ಯದಲ್ಲಿಯೇ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಕೋಲಾರಕ್ಕೆ ಆಗಮಿಸಿ ಮಾಹಿತಿ ನೀಡಲಿದ್ದಾರೆ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಪ್ರಕರಣ ತನಿಖಾ ಹಂತದಲ್ಲಿರುವ ಹಿನ್ನೆಲೆ ಮಾಹಿತಿ ನೀಡಲು ಎಸ್.ಪಿ.ಕಾರ್ತಿಕ್ ರೆಡ್ಡಿ ಹಿಂದೇಟು ಹಾಕಿದ್ದಾರೆ. ಇದೇ ವೇಳೆ ಇನ್ನೆರಡು ದಿನಗಳಲ್ಲಿ ಪ್ರಕರಣವನ್ನ ಭೇದಿಸಲಿದ್ದೇವೆ ಎಂದು ಸಹ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in