Connect with us

Bengaluru City

ಹಾಸ್ಯ ನಟ ಚಿಕ್ಕಣ್ಣ ಕಾರಿಗೆ ಕನ್ನ ಹಾಕಿದ ಕಳ್ಳರು

Published

on

ಬೆಂಗಳೂರು: ಕನ್ನಡ ಚಿತ್ರ ರಂಗದಲ್ಲಿ ಕಾಮಿಡಿ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿರುವ ನಟ ಚಿಕ್ಕಣ್ಣ ಅವರ ಕಾರಿನ ಗಾಜು ಒಡೆದು ಕಳ್ಳತನ ಮಾಡಿರುವ ಘಟನೆ ನಗರದ ನಾಗರವಾವಿ ಬಳಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಣ್ಣ ಅವರು ತಮ್ಮ ಕಾರನ್ನು ನಾಗರಭಾವಿಯ ಎಂಆರ್‍ಕೆ ಅಪಾರ್ಟ್ ಮೆಂಟ್ ಬಳಿ ನಿಲ್ಲಿಸಿ ತೆರಳಿದ್ದ ವೇಳೆ ಘಟನೆ ನಡೆದಿದೆ. ಕಾರಿನ ಗಾಜು ಒಡೆದು ತಮ್ಮ ಕೈ ತಳಕ ತೋರಿರುವ ಕಳ್ಳರು, ಕಾರಿನಲ್ಲಿದ್ದ ಬೆಲೆ ಬಾಳುವ ಸ್ಟಿರಿಯೋ ಹಾಗೂ ಎಲ್‍ಇಡಿ ಸೆಟ್ ಹೊತ್ತೊಯಿದಿದ್ದಾರೆ.

ಮೇ 20 ರ ಭಾನುವಾರದಂದು ಘಟನೆ ನಡೆದಿದ್ದು, ಈ ಸಂಬಂಧ ಚಿಕ್ಕಣ್ಣ ಅವರು ಈಗಾಗಲೇ ಅನ್ನಪೂಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.