Connect with us

Cinema

ಪ್ರಶಾಂತ್ ಮೇಲೆ ಕೈ ಎತ್ತಿದ ವೈಷ್ಣವಿ ಗೌಡ

Published

on

Share this

ಗೇಮ್ ಆಡುವಾಗ ತಾಳ್ಮೆ ಕಳೆದುಕೊಂಡ ವೈಷ್ಣವಿ ಗೌಡ ಪ್ರಶಾಂತ್ ಮೇಲೆ ಕೈ ಎತ್ತಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ತಾಳ್ಮೆಗೆ ಹೆಸರಾಗಿರುವ ವೈಷ್ಣವಿಯ ಸಿಟ್ಟನ್ನು ನೋಡಿದ ಬಿಗ್‍ಬಾಸ್ ವೀಕ್ಷಕರು ಶಾಕ್ ಆಗಿದ್ದಾರೆ.

ಮೌನ, ಅವರ ನಗು, ವಿಚಾರಧಾರೆಗಳು ಎಲ್ಲರಿಗೂ ಇಷ್ಟವಾಗಿದೆ. ಆದರೆ ಇದೇ ಮೊದಲ ಬಾರಿಗೆ ಅವರು ಕೋಪದ ವಿಚಾರದಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ. ಇದನ್ನು ನೋಡಿದ ವೀಕ್ಷಕರು ಸಾಕಷ್ಟು ಅಚ್ಚರಿ ಹೊರ ಹಾಕಿದ್ದಾರೆ. ಸುದೀಪ್ ಕೂಡಾ ವೈಷ್ಣವಿಯವರ ತಾಳ್ಮೆ ಕುರಿತಾಗಿ ಮಾತನಾಡುತ್ತಲಿರುತ್ತಾರೆ. ಇದನ್ನೂ ಓದಿ:  ಭಾವಿಪತಿಯ ಸುಳಿವು ಕೊಟ್ಟ ವೈಷ್ಣವಿ

ಬಿಗ್‍ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗೋಕೆ ನಾನಾ-ನೀನಾ ಎನ್ನುವ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್ ಅಡಿಯಲ್ಲಿ ಸಾಕಷ್ಟು ಸ್ಪರ್ಧೆಗಳನ್ನು ನೀಡಲಾಗುತ್ತಿದೆ. ಏನಾಗಲೀ ಮುಂದೆ ಸಾಗು ನೀ ಆಟದಲ್ಲಿ ಸ್ಪರ್ಧಿಗಳು ಬೆನ್ನಿಗೆ ಗೋಣಿಚೀಲ ಕಟ್ಟಿಕೊಂಡು ವೃತ್ತಗಳ ಒಳಗೆ ಓಡಬೇಕು. ಮುಂದಿನ ಸದಸ್ಯರ ಚೀಲವನ್ನು ಖಾಲಿ ಮಾಡಬೇಕು. ಈ ವೇಳೆ ವೈಷ್ಣವಿ ಹಿಂದೆ ಇದ್ದ ಪ್ರಶಾಂತ್ ಚೀಲವನ್ನು ಗಟ್ಟಿಯಾಗಿ ಎಳೆದಿದ್ದಾರೆ. ಇದು ವೈಷ್ಣವಿ ಅವರ ಕೋಪಕ್ಕೆ ಕಾರಣವಾಗಿದೆ.

ಆಗ ಸಿಟ್ಟಾದ ವೈಷ್ಣವಿ ಗೌಡ ಏಯ್, ನೋಡಿ ಪ್ರಶಾಂತ್ ಸಂಬರಗಿ ಏನು ಮಾಡ್ತಿದ್ದಾರೆ ಅಂತೆಲ್ಲ ಕ್ಯಾಪ್ಟನ್‍ಗೆ ದೂರು ಹೇಳಿದ್ದರು. ನೀವು ಎಳೆದರೆ ನನ್ನ ಕತ್ತಿಗೆ ಸಮಸ್ಯೆ ಆಗುತ್ತಿದೆ ಎಂದು ಪ್ರಶಾಂತ್‍ಗೆ ವೈಷ್ಣವಿ ಎಚ್ಚರಿಕೆ ಕೂಡ ನೀಡಿದ್ದರು. ಪದೇ ಪದೇ ಆಟದ ನಿಯಮದ ಉಲ್ಲಂಘನೆ ಮಾಡಿದರೆ ಔಟ್ ಎಂದು ಹೇಳುವೆ ಎಂದು ಪ್ರಶಾಂತ್‍ಗೆ ಅನೇಕ ಬಾರಿ ಕ್ಯಾಪ್ಟನ್ ದಿವ್ಯಾ ಸುರೇಶ್ ವಾರ್ನಿಂಗ್ ಮಾಡಿದ್ದರು.

ಬಿಗ್‍ಬಾಸ್ ಮನೆಯಲ್ಲಿ ಮಾತಿನ ಮೂಲಕ ಏಟು ಕೊಡೋದರಲ್ಲಿ ವೈಷ್ಣವಿ ಅವರದ್ದು ಎತ್ತಿದ ಕೈ. ಇದನ್ನು ಸುದೀಪ್ ಕೂಡ ಸಾಕಷ್ಟು ಬಾರಿ ಹೇಳಿದ್ದಾರೆ. ಮನೆ ಮಂದಿಯೂ ಇದನ್ನೂ ಒಪ್ಪಿಕೊಂಡಿದ್ದಾರೆ. ಆದರೆ ಈ ವಾರ ಅದು ಸುಳ್ಳಾಗಿದೆ. ವೈಷ್ಣವಿ ನಡೆದುಕೊಂಡ ರೀತಿಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆಟದ ವೇಳೆ ಪ್ರಶಾಂತ್ ಕೂಡ ಶುಭಾ ಪೂಂಜಾಗೆ ತೊಂದರೆ ಮಾಡಿದ್ದರಂತೆ. ವೈಷ್ಣವಿ ಒಮ್ಮೆ ಆಟದಿಂದ ಹೊರಗಡೆ ಹೋದಾಗ ದಿವ್ಯಾ ಸುರೇಶ್ ಮತ್ತೆ ಆಟ ಆಡಿ ಅಂತ ಹೇಳಿದ್ದಕ್ಕೆ ವೈಷ್ಣವಿ ಮತ್ತೆ ಆಟಕ್ಕಿಳಿದಿದ್ದರು. ಈ ಆಟಕ್ಕೆ ಸಂಬಂಧಪಟ್ಟಂತೆ ಚಕ್ರವರ್ತಿ ಚಂದ್ರಚೂಡ್, ಶಮಂತ್ ಬ್ರೊ ಗೌಡ, ಮಂಜು ಪಾವಗಡ, ಕೆಪಿ ಅರವಿಂದ್, ಶುಭಾ ಪೂಂಜಾ ಕೂಗಾಡಿದ್ದರು. ಪ್ರಶಾಂತ್ ಹೇಳೋದು ಬಂದು, ನಡವಳಿಕೆ ಒಂದು, ಜೆಂಟಲ್‍ಮ್ಯಾನ್ ರೀತಿ ಆಡ್ತಿದೀನಿ ಅಂತ ಹೇಳುತ್ತಿದ್ದಾರೆ ಎಂದು ವೈಷ್ಣವಿ, ಶುಭಾ ಮುಂದೆ ಹೇಳಿಕೊಂಡರು.

ವೈಷ್ಣವಿ ಗೌಡ ನನ್ನ ಮೇಲೆ ಕೂಗಾಡಿ ಕೈ ಎತ್ತಿದರು, ನನಗೆ ವೈಷ್ಣವಿನಾ ಇದು ಎಂದು ಶಾಕ್ ಆಗಿಬಿಟ್ಟೆ ಎಂದು ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾ, ದಿವ್ಯಾ ಉರುಡುಗ ಬಳಿ ಪ್ರಶಾಂತ್ ಹೇಳಿಕೊಂಡಿದ್ದಾರೆ. ಹುಡುಗಿ ನಮಗೆ ಹೊಡೆದರೆ ಇನ್ಸಲ್ಟ್ ಆಗತ್ತೆ ಎಂದು ಕೂಡ ಪ್ರಶಾಂತ್ ಹೇಳಿದ್ದಾರೆ. ಪ್ರಶಾಂತ್ ಸಂಬರಗಿ ಚೀಲ ತೂತು ಮಾಡೋದನ್ನು ಬಿಟ್ಟು ಎಳೆಯುತ್ತಿದ್ದಾರೆ ಎಂದು ವೈಷ್ಣವಿ ಆರೋಪ ಮಾಡಿದ್ದರು. ನಾನು ಮನುಷ್ಯಳು, ಹೀಗಾಗಿ ಕೋಪ ಬಂತು ಎಂದು ವೈಷ್ಣವಿ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement