ಬೊಮ್ಮಾಯಿ ನಾಯಕತ್ವದಲ್ಲೇ 2023ರ ಚುನಾವಣೆ: ವಿ.ಸೋಮಣ್ಣ

Advertisements

ಬೆಳಗಾವಿ: 2023 ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲೇ ನಡೆಯುತ್ತದೆ. ಸರ್ಕಾರ ತೆಗೆಯಬೇಕೆಂಬ ಹುಚ್ಚರಿದ್ದಾರೆ. ಆದರೆ ಈ ಬಗ್ಗೆ ಕ್ರಮವಹಿಸಲಾಗುತ್ತದೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಕನಸುಕಾಣುತ್ತಿದ್ದ ನಾಯಕರಿಗೆ ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.

Advertisements

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಎಲ್ಲವೂ ಸಿಎಂ ಪರಮಾಧಿಕಾರ. 2023 ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲಿ ನಡೆಯುತ್ತದೆ. ಗೊಂದಲ ಇದ್ದರೆ ಅದು ಮಾಧ್ಯಮದಲ್ಲಿ, ನಮ್ಮಲ್ಲಿ ಅಲ್ಲ. ನಮ್ಮ ಪಕ್ಷ ಅದಕ್ಕೆ ಮನ್ನಣೆ ಕೊಡಲ್ಲ. ತಿರುಕನ ಕನಸು ಕಾಣುವ ಜನರಿದ್ದಾರೆ. ಬಸವರಾಜ್ ಬೊಮ್ಮಾಯಿ 4 ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸರ್ಕಾರ ತೆಗೆಯಬೇಕೆಂಬ ಹುಚ್ಚರಿದ್ದಾರೆ. ಅಂಥವರ ವಿರುದ್ಧ ಪಕ್ಷ ಕ್ರಮವಹಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ

Advertisements

ಇದೇ ವೇಳೆ ಮತಾಂತರ ನಿಷೇಧ ಮಸೂದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪರಿಸ್ಥಿತಿ ಏನು ಎನ್ನುವುದಕ್ಕಿಂತ ಏನಿದೆ ಎನ್ನುವ ಬಗ್ಗೆ ಯೋಚಿಸಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟದಲ್ಲಿ ಮತಾಂತರ ಮಸೂದೆ ಜಾರಿಗೆ ತರಲು ಅನುಮತಿ ನೀಡಿದ್ದಾರೆ. ನಾವು ಕೆಲವೊಂದು ಮಾರ್ಪಾಡು ಮಾಡಿದ್ದೇವೆ ಅಷ್ಟೇ. ಇಂತಹ ಅವ್ಯವಸ್ಥೆಗಳು ಸರಿಯಾಗಬೇಕು ಎಂದು ಈ ಕಾಯ್ದೆಯಲ್ಲಿ ತರಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋಣಿಚೀಲದಲ್ಲಿ ನವಜಾತ ಶಿಶುವಿನ ಶವ ಪತ್ತೆ – ತಾಯಿ, ಪ್ರಿಯಕರನ ಬಂಧನ

ಕಾನೂನು ಸಚಿವ ಮಾಧುಸ್ವಾಮಿ ಈ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ನಮಗೆ ಎಲ್ಲಕ್ಕಿಂತ ದೊಡ್ಡದು ರಾಜ್ಯ. ರಾಜ್ಯಕ್ಕಿಂತ ದೊಡ್ಡದು ದೇಶ. ದೇಶಕ್ಕಿಂತ ದೊಡ್ಡದು ಸಮಾಜ. ಸಮಾಜದಲ್ಲಿ ಮತಾಂತರ ಕಾಯ್ದೆ ತಂದಿರುವುದು ಒಳ್ಳೆಯದಕ್ಕಾಗಿ. ಅವರು ತಂದಿರುವುದನ್ನು ನಾವು ಒಪ್ಪಿಕೊಂಡಿದ್ದೇವೆ. ನೀವು ಮಾಡಿರುವುದು ಸಮಂಜಸವಾಗಿದೆ. ಚರ್ಚೆ ಇಲ್ಲದೆ ಕಾಯ್ದೆ ಒಪ್ಪಿಕೊಂಡರೆ ಸ್ವಲ್ಪ ಬೆಲೆ ಇರುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisements

Advertisements
Exit mobile version