ಶ್ವೇತಾ ಚಂಗಪ್ಪ ಮಗನನ್ನು ನೋಡಲು ಮನೆಗೆ ಬಂದ ಕ್ರೇಜಿಸ್ಟಾರ್

By
1 Min Read

ಬೆಂಗಳೂರು: ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚಂಗಪ್ಪ ಅವರು ತಮ್ಮ ಪುತ್ರ ಜಿಯಾನ್, ಸ್ಯಾಂಡಲ್‍ವುಡ್ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಕಳೆದ ಮುದ್ದಾದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜಿಯಾನ್ ಸಾಮಾನ್ಯವಾಗಿ ಜನರ ಬಳಿಗೆ ಹೋಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾನೆ. ಆದರೆ ರವಿ ಸರ್ ಜೊತೆ ತುಂಬಾ ಆರಾಮವಾಗಿದ್ದನು. ಅವರನ್ನು ರವಿ ಮಾಮ ಎಂದು ಕರೆದಿದ್ದಾನೆ. ಜಿಯಾನ್ ಹುಟ್ಟಿದ ದಿನ ರವಿ ಸರ್ ಬಂದಿದ್ದರು, ಈಗ 2 ವರ್ಷಗಳ ನಂತರ ಭೇಟಿಯಾಗಿದ್ದೇವೆ. ಜಿಯಾನ್‍ಗಾಗಿ ಚಾಕ್ಲೇಟ್‍ಗಳನ್ನು ತಂದಿದ್ದರು ಈ ವಿಶೇಷ ವೀಡಿಯೊವನ್ನು ಪೋಸ್ಟ್ ಮಾಡದೆ ಇರಲು ನನಗೆ ಸಾಧ್ಯವಾಗಲಿಲ್ಲ. ಸಮಯ ತೆಗೆದುಕೊಂಡು ಮನೆಗೆ ಬಂದು ಕೆಲವು ಸಮಯ ಕಳೆದಿದ್ದೀರಾ ರವಿ ಸರ್ ನಮ್ಮೆಲ್ಲರ ಪ್ರೀತಿ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಬರೆದುಕೊಂಡು ಮುದ್ದಾದ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ ರವಿಚಂದ್ರನ್ ಅವರು ಜಿಯಾನ್‍ಗೆ ಚಾಕ್ಲೇಟ್ ನೀಡುತ್ತಿದ್ದಾರೆ. ಜಿಯಾನ್ ಮುದ್ದಾಗಿ ನಗುತ್ತಾ ಚಾಕ್ಲೇಟ್ ಅನ್ನು ರವಿಚಂದ್ರನ್ ಅವರಿಂದ ತೆಗೆದುಕೊಂಡು ತಾನು ತಿಂದು ರವಿಚಂದ್ರನ್ ಅವರ ಬಾಯಿಗೂ ಹಾಕಿ ಜೋರಾಗಿ ನಗುತ್ತಾ ಇರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

ಶ್ವೇತಾ ಚಂಗಪ್ಪ ಕೆಲವು ದಿನಗಳ ಹಿಂದೆ ತಮ್ಮ ಮಗನ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದರು. ಮಗನ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಈಗಾಗಲೇ ಜಿಯಾನ್ ಸೆಲೆಬ್ರಿಟಿ ಕಿಡ್ ಆಗಿದ್ದು, ಸಾವಿರಾರು ಮಂದಿ ಫಾಲೋವರ್ಸ್ ಹೊಂದಿದ್ದಾನೆ.

Share This Article
Exit mobile version