Karnataka
ಶಶಿಕಲಾ ಸ್ವಾಗತಿಸಲು ಬಂದಿದ್ದ ಬೆಂಬಲಿಗರ ಕಾರು ಬೆಂಕಿಗಾಹುತಿ

ಚೆನ್ನೈ: ಬರೋಬ್ಬರಿ 4 ವರ್ಷಗಳ ಜೈಲುವಾಸದ ಬಳಿಕ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ ಶಶಿಕಲಾ ಅವರು ಚೆನ್ನೈಗೆ ತೆರಳಿದ್ದಾರೆ. ಈ ವೇಳೆ ಅವರನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದ ಬೆಂಬಲಿಗರ ಕಾರು ಅಗ್ನಿ ಅವಘಡಕ್ಕೆ ತುತ್ತಾಗಿವೆ.
ಕೃಷ್ಣಗಿರಿ ಟೋಲ್ ಬಳಿ ಎರಡು ಕಾರುಗಳು ಹೊತ್ತಿ ಉರಿದಿವೆ. ಶಶಿಕಲಾಳನ್ನು ಸ್ವಾಗತಿಸಲು ಸಜ್ಜಾಗಿದ್ದ ಬೆಂಬಲಿಗರ ಕಾರುಗಳಿಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ.
ಕಾರುಗಳಲ್ಲಿ ಪಟಾಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಶಶಿಕಲಾ ಬರಮಾಡಿಕೊಳ್ಳುವ ವೇಳೆ ಪಟಾಕಿ ಸಿಡಿಸಲು ಬೆಂಬಲಿಗರು ತಯಾರಿ ನಡೆಸಿದ್ದರು. ಕಾರಿನಲ್ಲಿ ಪಟಾಕಿ ತಂದಿಟ್ಟಿದ್ದಾರೆ. ಆದರೆ ಈ ವೇಳೆ ಅಕಸ್ಮಿಕವಾಗಿ ಕಾರುಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿಯೇ ಪಟಾಕಿ ಉರಿದಿದೆ. ಘಟನೆಯಿಂದ ಹಾನಿ ಬಗ್ಗೆ ತಿಳಿದುಬಂದಿಲ್ಲ.
