International
ಹಿಮ ಸುನಾಮಿ – 10 ಮೃತದೇಹ ಪತ್ತೆ, 150ಕ್ಕೂ ಹೆಚ್ಚು ಮಂದಿ ಕಣ್ಮರೆ

ಡೆಹ್ರಾಡೂನ್: ಉತ್ತರಾಖಂಡ್ ದುರಂತದಲ್ಲಿ ಸಿಲುಕಿದ 16 ಮಂದಿ ರಕ್ಷಣೆ ಮಾಡಲಾಗಿದ್ದು, 10 ಮಂದಿ ಮೃತದೇಹ ಪತ್ತೆಯಾಗಿದೆ. 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.
ಹಿಮ ಸ್ಫೋಟಗೊಂಡು ನದಿಯಂತೆ ಹರಿದ ಪರಿಣಾಮ ತಪೋವನ ಬಳಿ ಇಂದು ನಿರ್ಮಾಣ ಹಂತದಲ್ಲಿರುವ ಡ್ಯಾಮ್ ಕೊಚ್ಚಿಕೊಂಡು ಹೋಗಿದೆ. ಈ ಕಾರಣದಿಂದ ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
Rescue operation underway at the tunnel near Tapovan dam in Chamoli to rescue trapped people. #Uttarakhand
(Pic courtesy: Indian Army) pic.twitter.com/lcKlHdcNn3
— ANI (@ANI) February 7, 2021
ಋಷಿಗಂಗಾ ವಿದ್ಯುತ್ ಯೋಜನೆ ಸಂಪೂರ್ಣ ನಾಶವಾಗಿದೆ. ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಚೆಲ್ಲಾಪಿಲ್ಲಿಯಾಗಿದ್ದಾರೆ. ಹಿಮ ಸುನಾಮಿ ನುಗ್ಗಿದ ಪ್ರದೇಶದಲ್ಲಿ ಮನೆಗಳೆಲ್ಲಾ ಧ್ವಂಸವಾಗಿವೆ. ಜೋಷಿಮಠದ ಸುರಂಗದಲ್ಲಿ 20ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ
#UPDATE: ITBP rescues all 16 people who were trapped in the tunnel near Tapovan, Chamoli. #Uttarakhand https://t.co/vi2ZbTyB9N
— ANI (@ANI) February 7, 2021
ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೃತದೇಹಗಳನ್ನು ದಡಕ್ಕೆ ತರುವ ಕೆಲಸ ನಡೆಯುತ್ತಿದೆ. ತಪೋವನ ಬಳಿ ಇರುವ ಸುರಂಗ ಮಾರ್ಗದಲ್ಲಿ 20 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಅವರನ್ನು ರಕ್ಷಣೆ ಮಾಡಲಾಗಿದೆ. ಅಲ್ಲಿರುವ ಸ್ಥಳೀಯರು ನೀಡುತ್ತಿದ್ದ ಮಾಹಿತಿಯ ಆಧಾರದ ಮೇಲೆ ರಕ್ಷಣಾ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.
ತಪೋವನ ಪ್ರದೇಶದ ರೆನಿ ಗ್ರಾಮಕ್ಕೆ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ಸೇನೆಯಿಂದ ಪ್ರವಾಹದ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
