Connect with us

Crime

ಮೊಬೈಲ್ ಸಿಗ್ನಲ್‍ಗಾಗಿ ಗುಡ್ಡ ಏರಿದವನಿಗೆ ಗುಂಡೇಟು!

Published

on

ಕಾರವಾರ: ಮೊಬೈಲ್ ಸಿಗ್ನಲ್‍ಗಾಗಿ ಗುಡ್ಡ ಏರಿ ಕುಳಿತಿದ್ದ ಯುವಕ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಘಟನೆ ಸಿದ್ದಾಪುರ ತಾಲೂಕಿನ ಕವಲಕೊಪ್ಪ ಗ್ರಾಮದ ಗೊಂಟನಾಳದಲ್ಲಿ ನಡೆದಿದೆ.

ಕುಂಬಾರಕುಳಿ ಮೂಲದ ಹಾಲಿ ಗೊಂಟನಾಳದ ನಿವಾಸಿ ಪ್ರದೀಪ್ ನಾರಾಯಣ್ ಗೌಡ (19) ಗಾಯಗೊಂಡ ಯುವಕ. ನಾರಾಯಣ್ ಗೌಡ ಮೊಬೈಲ್ ನೆಟ್‍ವರ್ಕ್ ಸಂಪರ್ಕ ಅರಸಿ ಗುಡ್ಡ ಏರಿ ಕುಳಿತು ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಚಟವುಳ್ಳ ಕವಲಕೊಪ್ಪ ಗೊಂಟನಾಳದ ರಾಮಾ ಕನ್ನಾ ನಾಯ್ಕ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ. ಪ್ರದೀಪ್ ಅವರನ್ನು ಪ್ರಾಣಿ ಎಂದು ರಾಮಾ ಕನ್ನಾ ಗುಂಡು ಹಾರಿಸಿದ್ದಾನೆ. ಇದನ್ನೂ  ಓದಿ: ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು

ಆರೋಪಿ

ಯುವಕ ಪ್ರದೀಪ್ ಅವರ ಬಲ ಮೊಣಕಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ  ಓದಿ: ವಾಟ್ಸಪ್ ಸ್ಟೇಟಸ್ ಮತ್ತೆ 30 ಸೆಕೆಂಡ್‍ಗೆ ಏರಿಕೆ