Connect with us

Crime

ಕಾರು, ಟ್ರಕ್ ಮುಖಾಮುಖಿ ಡಿಕ್ಕಿ- ಮಕ್ಕಳು ಸೇರಿ ಒಂದೇ ಕುಟುಂಬದ 9 ಮಂದಿ ದಾರುಣ ಸಾವು

Published

on

ಲಕ್ನೋ: ಎಸ್‍ಯುವಿ ಕಾರು ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎರಡು ಮಕ್ಕಳು ಸೇರಿ 9 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಪ್ರತಾಪ್‍ಗಢದಲ್ಲಿ ನಡೆದಿದೆ.

ಅಘಾತದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಬೆಳಗ್ಗೆ ತಮ್ಮ ಊರಿಗೆ ತೆರಳುತ್ತಿದ್ದಾಗ ನವಾಬ್‍ಗಂಜ್ ಸಮೀಪದ ವಾಜಿದ್‍ಪುರ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಮೃತರು ಒಂದೇ ಕುಟುಂಬದವರಾಗಿದ್ದು, ಬಿಹಾರದ ಭೋಜ್ಪುರ ಮೂಲದವರು ಎಂದು ವರದಿಯಾಗಿದೆ.

ಭೋಜ್ಪುರದ ಒಟ್ಟು 9 ಜನರು ಕಾರಿನಲ್ಲಿ ಉತ್ತರ ಪ್ರದೇಶದಿಂದ ತಮ್ಮ ಊರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಬಹುತೇಕ ಭಾಗ ನುಜ್ಜುಗುಜ್ಜಾಗಿದೆ. ಅಷ್ಟೇ ಅಲ್ಲದೆ ಟ್ರಕ್ ಚಕ್ರ ಕೂಡ ಜಖಂಗೊಂಡಿದೆ. ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಕೆಲವರು ವಾಹನ ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪ್ರತಾಪ್‍ಗಢದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದುರ್ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಂಬನಿ ಮಿಡಿದಿದ್ದಾರೆ.