Bollywood

ನೀವು ಮುಸ್ಲಿಂ ವ್ಯಕ್ತಿಯೇ? ನೆಟ್ಟಿಗನ ಪ್ರಶ್ನೆಗೆ ಬಾಬಿಲ್ ಉತ್ತರ

Published

on

Share this

ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಪುತ್ರ ಬಾಬಿಲ್ ಅವರಿಗೆ ನೆಟ್ಟಿಗರೊಬ್ಬರು ನೀವು ಮುಸ್ಲಿಂ ಧರ್ಮ ಪಾಲನೆ ಮಾಡ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ನೆಟ್ಟಿಗನ ಪ್ರಶ್ನೆಯ ಸ್ಕ್ರೀನ್ ಶಾಟ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಬಾಬಿಲ್ ತಮ್ಮದೇ ಸ್ಟೈಲಿನಲ್ಲಿ ಉತ್ತರ ನೀಡಿದ್ದಾರೆ.

ಇರ್ಫಾನ್ ಖಾನ್ ಪುತ್ರ ಬಾಬಿಲ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಖಾಸಗಿ ಫೋಟೋ, ಭಾವನೆಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ನೆಟ್ಟಿಗರು ಕೇಳುವ ಪ್ರಶ್ನೆಗಳಿಗೆ ಉತ್ತರ ಸಹ ನೀಡಿರುತ್ತಾರೆ. ಇದೀಗ ಧರ್ಮದ ಕುರಿತು ಕೇಳಲಾದ ಪ್ರಶ್ನೆಗೆ ಬಾಬಿಲ್ ನೀಡಿರುವ ಉತ್ತರದ ಸಾಲುಗಳಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ನಾನು ಬೈಬಲ್, ಭಗವದ್ಗೀತೆ ಮತ್ತು ಖುರಾನ್ ಪಠಣ ಮಾಡಿದ್ದೇನೆ. ಸದ್ಯ ಗುರುಗೃಂಥ ಓದುತ್ತಿದ್ದೇನೆ. ನಾನು ಎಲ್ಲರಿಗಾಗಿ ಇದ್ದೇನೆ. ನಾವು ಪರಸ್ಪರ ಒಬ್ಬರು, ಮತ್ತೊಬ್ಬರ ಏಳಿಗೆಗೆ ಸಹಾಯ ಮಾಡುತ್ತೇವೆ. ಇದುವೇ ಪ್ರತಿ ಧರ್ಮದ ಆಧಾರ ಎಂದು ನೆಟ್ಟಿಗನ ಪ್ರಶ್ನೆಗೆ ಬಾಬಿಲ್ ಉತ್ತರಿಸಿದ್ದಾರೆ. ಇನ್ನೂ ತಮಗೆ ಪ್ರಶ್ನೆ ಕೇಳಿದ ನೆಟ್ಟಿಗನ ಹೆಸರನ್ನು ಬಾಬಿಲ್ ಬ್ಲರ್ ಮಾಡಿದ್ದಾರೆ.

ಬಾಲಿವುಡ್ ಲೆಜೆಂಡ್, ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ ನಿಧನವಾದಾಗ ಬಾಬಿಲ್ ಎಮೋಷನಲ್ ಸಾಲುಗಳನ್ನು ಸೋಶಿಯಲ್ ಬರೆದುಕೊಂಡಿದ್ದರು. ಸದ್ಯ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದಕ್ಕೆ ದುಃಖವಾಗ್ತಿದೆ. ನಾನು ತಂದೆ ಇರ್ಫಾನ್ ಖಾನ್ ಮತ್ತು ದಿಲೀಪ್ ಕುಮಾರ್ ಅವರಿಂದ ಪ್ರೇರಪಿತಗೊಂಡಿದ್ದೇನೆ ಎಂದು ಹೇಳಿದ್ದರು.

 

View this post on Instagram

 

A post shared by Babil (@babil.i.k)

Click to comment

Leave a Reply

Your email address will not be published. Required fields are marked *

Advertisement
Advertisement