Connect with us

International

ಬಿನ್ ಲಾಡೆನ್ ಮಗನ ಮಾಹಿತಿ ನೀಡಿದ್ರೆ 10 ಲಕ್ಷ ಡಾಲರ್ ಬಹುಮಾನ!

Published

on

ವಾಷಿಂಗ್ಟನ್: ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‍ನ ಮಗನ ಬಗ್ಗೆ ಮಾಹಿತಿ ನೀಡಿದರೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಣೆ ಮಾಡಿದೆ.

ಅಮೆರಿಕ ಸ್ಟೇಟ್ ಡಿಪಾರ್ಟ್‍ಮೆಂಟ್ ಈ ಕುರಿತು ಗುರುವಾರ ನೋಟಿಸ್ ನೀಡಿದ್ದು, ಲಾಡೆನ್ ಪುತ್ರ ಹಮ್ಜಾ ಮಗನಿಗಾಗಿ ಹುಡುಕಾಟ ನಡೆಸುತ್ತಿದೆ. ಆತನ ಬಗ್ಗೆ ಮಾಹಿತಿ ನೀಡಿದರೆ 1 ಮಿಲಿಯನ್ ಅಂದರೆ 7 ಕೋಟಿ ರೂ. ಬಹುಮಾನ ಸಿಗಲಿದೆ.

ಲಾಡೆನ್ ಹತ್ಯೆಯಾದ ಬಳಿಕ ಆತನ ಮಗ ಹಮ್ಜಾನನ್ನು ಅಲ್ ಖೈದಾ ಸಂಘಟನೆಯ ಯುವರಾಜ ಎಂದು ಘೋಷಣೆ ಮಾಡಲಾಗಿತ್ತು. ಈತ ಸದ್ಯ ಉಗ್ರ ಸಂಘಟನೆ ಅಲ್ ಖೈದಾ ನಾಯಕನಾಗಿ ಬೆಳೆಯುತ್ತಿದ್ದಾನೆ. ಆತ ಯಾವುದೇ ರಾಷ್ಟ್ರದಲ್ಲಿ ಇದ್ದರು ಕೂಡ ಮಾಹಿತಿ ನೀಡಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2011 ರಲ್ಲಿ ಲಾಡೆನ್ ನನ್ನು ಹತ್ಯೆ ಮಾಡಲಾಗಿತ್ತು. ಈಗ ಲಾಡೆನ್ ಪುತ್ರನಿಗೆ 30 ವರ್ಷ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದ್ದು, ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹಜ್ಜಾ ಮುಂದಾಗಿದ್ದಾನೆ ಎನ್ನಲಾಗಿದೆ. ಈ ಹಿಂದೆ 2015 ರಲ್ಲಿ ಆತ ಅಮೆರಿಕ ವಿರುದ್ಧ ದಾಳಿ ನಡೆಸುವ ಬಗ್ಗೆ ಆಡಿಯೋವನ್ನು ಬಿಡುಗಡೆ ಮಾಡಿ ಎಚ್ಚರಿಕೆ ನೀಡಿದ್ದ. ಅಲ್ಲದೇ ಸಿರಿಯಾದಲ್ಲಿ ಜಿಹಾದಿಗಳು ಒಂದಾಗುವಂತೆ ಕರೆ ನೀಡಿದ್ದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv