Connect with us

Bengaluru City

ಸ್ಟಾರ್ ವಾರ್ ಬಗ್ಗೆ ಬುದ್ಧಿವಂತನ ಮಾತು

Published

on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ವಾರ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

ಐ ಲವ್ ಯೂ ಸಿನಿಮಾ 100 ದಿನದ ಸಂಭ್ರಮದಲ್ಲಿ ಮಾತನಾಡಿದ ಉಪೇಂದ್ರ, ನಮಗೆ ಕನ್ನಡ ಚಿತ್ರರಂಗ ಮುಖ್ಯ. ಸ್ಟಾರ್ ವಾರ್ ಅನ್ನೋದು ಸಣ್ಣ ಮಟ್ಟದಲ್ಲಿರಬೇಕೇ ಹೊರತು ದೊಡ್ಡದಾಗಬಾರದು. ಸಿನಿಮಾ ಚೆನ್ನಾಗಿದ್ದರೆ ಅಭಿಮಾನಿಗಳು ಎಲ್ಲರ ಸಿನಿಮಾ ನೋಡುತ್ತಾರೆ. ಇಂದು ಎಲ್ಲ ಅಭಿಮಾನಿಗಳು ಬಂದು ಪೋಸ್ಟರ್ ರಿಲೀಸ್ ಮಾಡಿದ್ದು ಖುಷಿಯಾಯ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.

ಇಂದಿನ ಸಿನಿಮಾಗಳು 50 ದಿನ ಚಿತ್ರಮಂದಿರದಲ್ಲಿರೋದು ಕಷ್ಟ. ಆದ್ರೆ ನಮ್ಮ ಐ ಲವ್ ಯು ಸಿನಿಮಾ ನೂರು ದಿನ ಪೂರೈಸಿದೆ. ಚಿತ್ರಕ್ಕಾಗಿ ಕೆಲಸ ಮಾಡಿದ ಎಲ್ಲರೂ ಇಂದು ಖುಷಿಯಿಂದ ಶೀಲ್ಡ್ ಪಡೆದುಕೊಂಡರು. ಇಂದು ದೊಡ್ಡ ಸಿನಿಮಾಗಳ ಫಲಿತಾಂಶ ಒಂದೆರೆಡು ವಾರದಲ್ಲಿ ಬರುತ್ತದೆ. ಮುಂದಿನ ದಿನಗಳಲ್ಲಿ ಸಿನಿಮಾಗಳು ಶತಕ ದಿನ ಆಚರಿಸಲಿ ಎಂದರು.