Saturday, 25th January 2020

ಉಪ್ಪಿ-ರಚ್ಚು ಮಧ್ಯೆ I Love You ವಾರ್- ಬುದ್ಧಿವಂತನ ಮೊದಲ ಪ್ರತಿಕ್ರಿಯೆ

ಬೆಂಗಳೂರು: ನಾನು ಮತ್ತೆ ಯಾವತ್ತು ಈ ರೀತಿಯ ಪಾತ್ರ ಮಾಡಲ್ಲ ಎಂದು ಗುಳಿಕೆನ್ನೆ ಹುಡುಗಿ ರಚಿತಾ ರಾಮ್ ಶಪಥ ಮಾಡಿದ್ದರು. ರಚಿತಾ ರಾಮ್ ಅವರ ಈ ನಿರ್ಧಾರಕ್ಕೆ ನಟ ಉಪೇಂದ್ರ ಫಸ್ಟ್ ಟೈಮ್ ರಿಯಾಕ್ಟ್ ಮಾಡಿದ್ದಾರೆ. ಬಲವಂತವಾಗಿ ಆ್ಯಕ್ಟ್ ಮಾಡಿಸೋಕ್ಕೆ ಆಗುತ್ತಾ? ಸುಮಾರು ಸಿನಿಮಾಗಳಲ್ಲಿ ನಟಿಸಿರುವ ರಚಿತಾ ಈ ರೀತಿ ಹೇಳೋದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ.

‘ಐ ಲವ್ ಯೂ’ ಸಿನಿಮಾ ಅಂಗಳದಲ್ಲಿ ಏನಾಗಿತ್ತು ಎಂಬ ಬಗ್ಗೆ ರಿಯಲ್ ಸ್ಟಾರ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಉಪ್ಪಿ ‘ಐ ಲವ್ ಯೂ’ ಸಿನಿಮಾ ಸದ್ಯ ಥಿಯೇಟರ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆದರೆ ಸಿನಿಮಾದ ಒಂದು ಹಸಿಬಿಸಿ ದೃಶ್ಯ ಉಪೇಂದ್ರ ಮತ್ತು ರಚಿತಾ ರಾಮ್ ನಡುವಿನ ಕುಸ್ತಿಗೆ ಕಾರಣವಾಗಿದೆ. ಇನ್ನುಂದೆ ನಾನು ಇಂಥ ಪಾತ್ರ ಮಾಡಲ್ಲ. ಇದಕ್ಕೆಲ್ಲಾ ಉಪೇಂದ್ರ ಅವರೇ ಕಾರಣ ಎಂದು ರಚಿತಾ ರಾಮ್ ಆರೋಪಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಪ್ರಿಯಾಂಕಾ ಉಪೇಂದ್ರ ಪದೇ ಪದೇ ಉಪ್ಪಿ ಹೆಸರು ತರಬೇಡಿ ಎಂದು ಗರಂ ಆಗಿದ್ದರು.

ಈ ಬಗ್ಗೆ ಮಾತನಾಡಿರುವ ಉಪೇಂದ್ರ ಅವರು, ಒಂದು ಸೀನ್‍ನಿಂದ ಸಿನಿಮಾ ಸಕ್ಸಸ್ ಆಗುವ ಹಾಗಿದ್ದರೆ ಎಲ್ಲಾ ಸಿನಿಮಾದಲ್ಲೂ ಆ ರೀತಿಯ ಸೀನ್ ಮಾಡಿಬಿಡುತ್ತಿದ್ದರು. ಅದು ಅಲ್ಲದೇ ಖ್ಯಾತ, ಹಿರಿಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ಅವರು ಈ ಹಾಡಿಗೆ ನೃತ್ಯ ನಿದೇಶನ ಮಾಡಿದ್ದರು. ಅವರು ಹೇಳಿದನ್ನ ಮಾಡುವುದೇ ನಟರಿಗೆ ದೊಡ್ಡ ಟಾಸ್ಕ್. ಹೀಗಿರೋವಾಗ ನಾನೇ ಡೈರೆಕ್ಟ್ ಮಾಡಿದೆ ಎಂದು ರಚಿತಾ ರಾಮ್ ಹೇಳಿದ್ದು ಸರಿಯಲ್ಲ. ಅವರಿಗೆ ಇಷ್ಟ ಇಲ್ಲದಿದ್ದರೆ ಆಗಲ್ಲ ಎಂದು ಹೇಳಬಹುದಿತ್ತು ಎಂದಿದ್ದಾರೆ.

ನಿರ್ದೇಶಕರು ತುಂಬಾ ಮುತುವರ್ಜಿ ವಹಿಸಿ ಈ ದೃಶ್ಯವನ್ನು ನಿರ್ದೇಶನ ಮಾಡಿದ್ದಾರೆ. ಏಕೆಂದರೆ ಇಂತಹ ದೃಶ್ಯ ಮಾಡುವ ವೇಳೆ ನೋಡುಗರಿಗೆ ಇಷ್ಟವಾಗಬೇಕು. ಆದ್ದರಿಂದಲೇ ಪ್ರತಿ ಬಾರಿ ಮಾನಿಟರ್ ನೋಡಿ ದೃಶ್ಯ ಚೆನ್ನಾಗಿಲ್ಲಾ ಎಂದರೆ ರಿ ಟೇಕ್ ಮಾಡುತ್ತಿದ್ದರು. ಅಂದಹಾಗೇ ಇದನ್ನು ಅವರು ಯಾವುದೋ ಫೀಲಿಂಗ್‍ನಲ್ಲಿ ಹೇಳಿದ್ದಾರೆ. ಅದು 10 ಬಾರಿ ಪದೇ ಪದೇ ಕೇಳಿರುವುದರಿಂದ ಎಮೋಷನಲ್ ಆಗಿ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.

ಆರ್. ಚಂದ್ರು ನಿರ್ದೇಶನದ ಸಿನಿಮಾಗೆ ಜನ ಒಳ್ಳೆ ಪ್ರತಿಕ್ರಿಯೆ ನೀಡಿದ್ದಾರೆ. ಥೇಟರ್‍ನಲ್ಲಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ರಚಿತಾ ರಾಮ್ ಹೇಳಿಕೆ ಮಾತ್ರ ಮತ್ತೆ ಮತ್ತೆ ಸೌಂಡ್ ಮಾಡುತ್ತಿದೆ.

Leave a Reply

Your email address will not be published. Required fields are marked *