Connect with us

ಮೈಸೂರಿನಲ್ಲಿ ತರಕಾರಿ ವಿತರಿಸಿದ ಉಪೇಂದ್ರ ಅಭಿಮಾನಿಗಳು

ಮೈಸೂರಿನಲ್ಲಿ ತರಕಾರಿ ವಿತರಿಸಿದ ಉಪೇಂದ್ರ ಅಭಿಮಾನಿಗಳು

ಮೈಸೂರು: ನಟ ಉಪೇಂದ್ರ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅದನ್ನು ಬಡ ಕಲಾವಿದರಿಗೆ ಹಾಗೂ ಬಡ ಜನರಿಗೆ ವಿತರಿಸುವ ಕಾರ್ಯವನ್ನು ಮೈಸೂರಿನಲ್ಲಿ ಮುಂದುವರಿಸಿದ್ದಾರೆ.

ಬಡ ಜನರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದ, ಉಪೇಂದ್ರ ಅವರ ಅಭಿಮಾನಿಗಳ ತಂಡ ಇಂದು ತರಕಾರಿ ವಿತರಿಸಿದೆ. ಮೈಸೂರಿನ ಅಗ್ರಹಾರದಲ್ಲಿ ಟೊಮೇಟೋ, ಸೋರೆಕಾಯಿ, ಕುಂಬಳಕಾಯಿಯನ್ನು ಬಡ ಜನರಿಗೆ ವಿತರಿಸಿದರು.

ಚಾಮರಾಜನಗರ ಶಿವಕುಮಾರ್ ಎಸ್. ರವರು 3000 kg ಟೊಮೇಟೋ 15,000 ರೂ ( ಸಾರಿಗೆ ವೆಚ್ಚ ಸೇರಿ ) 2000 kg ಮೈಸೂರಿನಲ್ಲಿ ಶಿವ ಅವರಿಗೆ ನೀಡಿದ್ದಾರೆ. ಶಿವ ಅವರ ನೇತ್ರತ್ವದಲ್ಲಿ ಮೈಸೂರಿನಲ್ಲಿ ವಿತರಿಸಲಾಯಿತು ಎಂದು ಉಪೇಂದ್ರ  ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಮೈಸೂರಿನ ಶೂಟಿಂಗ್ ಶಿವು ನೇತೃತ್ವದಲ್ಲಿ ತರಕಾರಿ ಹಂಚಿಕೆ ಮಾಡಲಾಯಿತು. ತರಕಾರಿ ಪಡೆಯಲು ಸರತಿ ಸಾಲಿನಲ್ಲಿ ಜನರು ನಿಂತಿದ್ದರು. ಎಲ್ಲರಿಗೂ 10ಕೆಜಿಗು ಹೆಚ್ಚು ತರಕಾರಿ ನೀಡಲಾಗಿದೆ.

Advertisement
Advertisement