Connect with us

ದರ್ಶನ್ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಉಪೇಂದ್ರ

ದರ್ಶನ್ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಉಪೇಂದ್ರ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿರುವ ಪ್ರಾಣಿಗಳನ್ನ ದತ್ತು ಪಡೆಯುವ ಕರೆಗೆ ರಿಯಲ್ ಸ್ಟಾರ್ ಉಪೇಂದ್ರ ಓಗೊಟ್ಟಿದ್ದಾರೆ. ಉಪೇಂದ್ರ ಮೈಸೂರಿನ ಮೃಗಾಲಯದಿಂದ ಆಫ್ರಿಕನ್ ಆನೆಯನ್ನ ದತ್ತು ಪಡೆದುಕೊಂಡಿರುವ ವಿಷಯವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಣಿಗಳೇ ಗುಣದಲಿ ಮೇಲು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಘಾಲಯ ದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ ಎಂದು ಬರೆದು ಮೃಗಾಲಯ ನೀಡಿರುವ ಪ್ರಮಾಣ ಪತ್ರವನ್ನ ಶೇರ್ ಮಾಡಿಕೊಂಡಿದ್ದಾರೆ.

ಉಪೇಂದ್ರ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದರ್ಶನ್, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಫ್ರಿಕನ್ ಆನೆ ದತ್ತು ಪಡೆದ ಶ್ರೀ ಉಪೇಂದ್ರ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕೊರೊನಾ ಅನ್ನೋ ಮಹಾಮಾರಿ ಇಡೀ ಜೀವಸಂಕುಲವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಇದಕ್ಕೆ ಪ್ರಾಣಿಗಳೂ ಸಹ ಹೊರತಾಗಿಲ್ಲ. ಕಳೆದ ಒಂದೂವರೆ ವರ್ಷದಿಂದ ಜನ ಸಹ ಮೃಗಾಲಯಗಳತ್ತ ಬರ್ತಿಲ್ಲ. ಹೀಗಾಗಿ ಕೊರೊನಾ ಹಿಡಿತಕ್ಕೆ ಕರ್ನಾಟಕದ ಮೃಗಾಲಯಗಳು ಸಂಕಷ್ಟದಲ್ಲಿ ಸಿಲುಕಿ, ಝೂ ನಿರ್ವಹಣೆಗೂ ಕಷ್ಟಪಡುವಂತಾಗಿತ್ತು. ಪ್ರಾಣಿಗಳ ವೇದನೆ, ಕಷ್ಟ ಸಾರಥಿಗೆ ಆಘಾತವನ್ನುಂಟು ಮಾಡಿತ್ತು. ಮೊದಲೇ ಯಜಮಾನನಿಗೆ ಪ್ರಾಣಿಗಳಂದ್ರೆ ಇಷ್ಟ. ಕೊರೊನಾ ಕಾಲದಲ್ಲಿ ಪ್ರಾಣಿಗಳ ಕಷ್ಟ ನೋಡಲಾಗದೇ ಮಹಾಯಜ್ಞಕ್ಕೆ ಕೈ ಹಾಕಿದ್ರು ಚಾಲೆಂಜಿಂಗ್ ಸ್ಟಾರ್.. ಚಕ್ರವರ್ತಿಯ ಒಂದು ಕರೆಗೆ ಇಡೀ ಕರುನಾಡು ಸಾಥ್ ನೀಡಿದೆ. ಇದೀಗ ದಾಸನ ಈ ಕರೆಗೆ ಚಂದನವನದ ತಾರೆಗಳು ಸಹ ಕೈ ಜೋಡಿಸ್ತಿದ್ದಾರೆ.

Advertisement
Advertisement