Connect with us

Corona

ಹೈಕೋರ್ಟ್ ಆದೇಶ ಜಾರಿಗೆ ತರಲ್ಲ, ಲಾಕ್‍ಡೌನ್ ಇಲ್ಲ: ಸಿಎಂ ಯೋಗಿ ಆದಿತ್ಯನಾಥ್

Published

on

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಖನೌ ಸೇರಿ ಐದು ನಗರಗಳನ್ನು ಒಂದು ವಾರ ಕಂಪ್ಲೀಟ್ ಲಾಕ್‍ಡೌನ್ ಮಾಡಲು ಅಲಹಾಬಾದ್ ಹೈಕೋರ್ಟ್ ಆದೇಶದ ನೀಡಿತ್ತು. ಆದ್ರೆ ಇದನ್ನು ಜಾರಿ ಮಾಡದಿರಲು ಸಿಎಂ ಯೋಗಿ ಸರ್ಕಾರ ತೀರ್ಮಾನಿಸಿದೆ.

ಅಲಹಾಬಾದ್ ಹೈಕೋರ್ಟ್ ವಾರಾಣಸಿ, ಕಾನ್ಪುರ ನಗರ, ಗೋರಖ್ಪುರ, ಲಕ್ನೋ ಮತ್ತು ಪ್ರಯಾಗ್‍ರಾಜ್ ನಲ್ಲಿ ಏಪ್ರಿಲ್ 26ರವರೆಗೆ ಲಾಕ್‍ಡೌನ್ ಮಾಡುವಂತೆ ಇಂದು ಸಂಜೆ ಆದೇಶ ನೀಡಿತ್ತು.

ಆದೇಶದ ಕುರಿತು ಸರ್ಕಾರದಿಂದ ಪ್ರತಿಕ್ರಿಯೆ ಬಂದಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ನಿಯಂತ್ರಣ ಅವಶ್ಯಕವಾಗಿದೆ. ಈಗಾಗಲೇ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮುಂದೆಯೂ ಕಠಿಣ ರೂಲ್ಸ್ ತರಲಾಗುವುದು. ಜೀವ ಉಳಿಸೋದರ ಜೊತೆಗೆ ಜೀವನವನ್ನ ಕಾಪಾಡಬೇಕು. ಇಂತಹ ಸಂದರ್ಭದಲ್ಲಿ ಇಡೀ ನಗರವನ್ನ ಲಾಕ್‍ಡೌನ್ ಮಾಡಿದ್ರೆ ಜೀವನ ನಿರ್ವಹಣೆ ಕಷ್ಟ ಆಗಲಿದೆ. ಜನರು ಸಹ ಸ್ವಯಂ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.

Click to comment

Leave a Reply

Your email address will not be published. Required fields are marked *