Friday, 22nd March 2019

Recent News

ವಿದ್ಯಾರ್ಥಿನಿಯನ್ನು ಹಲ್ಲೆಗೈದು ಮರಕ್ಕೆ ನೇಣು ಹಾಕಿದ್ರು: ಮೂವರು ಅಪ್ರಾಪ್ತರು ಅರೆಸ್ಟ್

ಲಕ್ನೋ: ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯನ್ನು ತಡೆದು ಆಕೆಯ ಪ್ರಿಯಕರ ಸೇರಿ ಮೂವರು ಥಳಿಸಿ, ಮರಕ್ಕೆ ನೇಣು ಹಾಕಿದ ಘಟನೆ ಉತ್ತರ ಪ್ರದೇಶದ ಮೇನ್ಪುರಿ ಜಿಲ್ಲೆಯಲ್ಲಿ ನಡೆದಿದೆ.

ಮೇನ್ಪುರಿ ಜಿಲ್ಲೆಯ ಹವಿಲಿಯಾ ಗ್ರಾಮದ ಸಮಿತಾ ಯಾದವ್ ಕೊಲೆಯಾದ ವಿದ್ಯಾರ್ಥಿನಿ. ಸವಿತಾ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಾಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದದ್ದು ಏನು?:
ಸವಿತಾ ಮಂಗಳವಾರ ಕಾಲೇಜಿನ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳುತ್ತಿದ್ದಳು. ಆಕೆಯನ್ನು ಗ್ರಾಮದ ಹೊರವಲಯದಲ್ಲಿ ತಡೆದ ಮೂವರು ಹಲ್ಲೆ ಎಸಗಿ ಮರಕ್ಕೆ ನೇಣು ಹಾಕಿ ಪರಾರಿಯಾಗಿದ್ದಾರೆ. ಈ ವೇಳೆ ಸವಿತಾ ಕಿರುಚಿದ ಧ್ವನಿ ಕೇಳಿದ ವಿದ್ಯಾರ್ಥಿನಿಯ ಸಹೋದರ ಅಲ್ಲಿಗೆ ಬಂದಿದ್ದಾನೆ. ಆಗ ಸವಿತಾ ಮೃತ ದೇಹ ಪತ್ತೆಯಾಗಿದೆ.

ಯಾರೋ ಕಾಪಾಡಿ, ಕಾಪಾಡಿ ಅಂತಾ ಕಿರುಚಿದ ಧ್ವನಿ ಕೇಳಿತು. ತಕ್ಷಣವೇ ಅಲ್ಲಿಗೆ ಹೋಗುತ್ತಿದ್ದಂತೆ ಸವಿತಾ ಮೃತದೇಹ ನೇಣು ಬೀಗಿದ ಸ್ಥಿತಿಯಲ್ಲಿ ಕಂಡಿದೆ ಎಂದು ಅವಿನಾಶ್, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಕೊಲೆ ಮಾಡಿದ ಮೂವರಲ್ಲಿ ಒಬ್ಬನ ಜೊತೆಗೆ ಸವಿತಾ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಳು. ಆತನು ಸವಿತಾ ಕಾಲೇಜಿನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಕೆಲವು ತಿಂಗಳಿನಿಂದ ಇಬ್ಬರ ಮಧ್ಯೆ ಸಂಬಂಧವಿತ್ತು ಎನ್ನಲಾಗಿದ್ದು, ಸವಿತಾ ಯುವಕನ ಜೊತೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ಮನೆಯವರ ಕೈಗೆ ಸಿಕ್ಕಿಬಿದ್ದಿದ್ದಳು ಅಂತಾ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಬಾಲಕರನ್ನು ಬಂಧಿಸಿ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಅಂತಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆ ಮಾಡಿದ ನಂತರ ಮರಕ್ಕೆ ನೇಣು ಹಾಕಿದ್ದು ಯಾಕೆ ಎನ್ನುವ ಪ್ರಶ್ನೆ ಈಗ ಮೂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *