Connect with us

Bengaluru City

ಮಂಗಳವಾರದಿಂದ ಬಾರ್‌, ಪಬ್‌, ರೆಸ್ಟೋರೆಂಟ್‌ ಓಪನ್‌ – ಷರತ್ತುಗಳು ಏನು?

Published

on

ಬೆಂಗಳೂರು: ಮಂಗಳವಾರದಿಂದ ದೇಶ, ರಾಜ್ಯದಲ್ಲಿ ಅನ್‍ಲಾಕ್-4 ಪ್ರಕ್ರಿಯೆ ಆರಂಭವಾಗುತ್ತಿದೆ. ರಾಜ್ಯ ಸರ್ಕಾರ, ಕೇಂದ್ರ ಪ್ರಕಟಿಸಿದ್ದ ಅನ್‍ಲಾಕ್ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಾರಿಗೆ ತಂದಿದೆ.

ಲಾಕ್‍ಡೌನ್‍ನಿಂದಾಗಿ ಆರು ತಿಂಗಳಿಂದ ಬಂದ್ ಆಗಿದ್ದ ಬಾರ್, ಪಬ್, ರೆಸ್ಟೋರೆಂಟ್‍ಗಳು ನಾಳೆಯಿಂದ ಓಪನ್ ಆಗಲಿವೆ. ಆದರೆ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಕೊಡಬೇಕು ಎಂದು ಸೂಚಿಸಿದೆ.

ಮಾರ್ಗಸೂಚಿಯಲ್ಲಿ ಏನಿದೆ?
– ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ. ಬಾರ್ ಮತ್ತು ರೆಸ್ಟೋರೆಂಟ್ ಕೆಲಸಗಾರರು ಗ್ರಾಹಕರ ಕೈಗೆ ಮದ್ಯ ಕೊಡುವಂತಿಲ್ಲ.
– ರೂಂ, ಕ್ಯಾಬಿನ್ ಗಳ ಬಾಗಿಲ ಬಾಗಿಲ ಬಳಿ ಮದ್ಯ ಅಥವಾ ಆಹಾರ ಇಡಬೇಕು. ಕೆಲಸಗಾರರು ಗ್ಲೌಸ್‌ ಧರಿಸಿ ಕೆಲಸ ಮಾಡಬೇಕು.
– ಗುಂಪು ನಿಯಂತ್ರಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು. ಪಾರ್ಕಿಂಗ್‌ ಜಾಗದಲ್ಲಿರುವ ಸಿಬ್ಬಂದಿ ಮಾಸ್ಕ್‌/ ಫೇಸ್‌ ಕವರ್‌ ಧರಿಸಬೇಕು. ವಾಹನಗಳು ನಿಲ್ಲುವ ಜಾಗದಲ್ಲಿ ಸ್ಯಾನಿಟೈಸ್‌ ಮಾಡಿರಬೇಕು.

– ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿರಬೇಕು. 6 ಅಡಿ ಸಾಮಾಜಿಕ ಅಂತರವನ್ನು ಕಾಪಾಡಬೇಕು. ಬಫೆ ವ್ಯವಸ್ಥೆ ಮಾಡಬಹುದು. ಆದರೆ ಇಲ್ಲೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ.
– ಎಸ್ಕಲೇಟರ್‌ನಲ್ಲಿ ಒಂದು ಸ್ಟೆಪ್‌ ಬಿಟ್ಟು ಮತ್ತೊಂದು ಸ್ಟೆಪ್‌ನಲ್ಲಿ ವ್ಯಕ್ತಿಗಳು ಹೋಗಬೇಕು. ಏರ್‌ ಕಂಡಿಷನ್‌ ಇರುವ ರೆಸ್ಟೋರೆಂಟ್‌ಗಳ ಉಷ್ಣಾಂಶ 24-30 ಡಿಗ್ರಿ ಸೆಲ್ಸಿಯಸ್‌ ಇರಬೇಕು.
– ಸಾಧ್ಯವಾದಷ್ಟು ಡಿಜಿಟಲ್‌ ಮೂಲಕ ಬಿಲ್‌ ಪಾವತಿಗೆ ಉತ್ತೇಜಿಸುವುದು. ಒಬ್ಬ ಗ್ರಾಹಕ ತೆರಳಿದ ಬಳಿಕ ಟೇಬಲ್‌ ಶುಚಿಗೊಳಿಸುವುದು.

– ನೀರಿಗೆ ಶೇ.1 ರಷ್ಟು ಸೋಡಿಯಂ ಹೈಪೋಕ್ಲೋರೆಟ್ ಮಿಶ್ರಣ ಇರುವ ಇರುವ ದ್ರಾವಣವನ್ನು ಹಾಕಿ ಶೌಚಾಲಯ, ಕೈ ತೊಳೆಯುವ ಜಾಗ, ಟೇಬಲ್‌ ಹಾಕಿ ಸ್ವಚ್ಛಗೊಳಿಸುವುದು.
– ಆಡುಗೆ ಮನೆಯಲ್ಲಿ ಕೆಲಸಗಾರರು ಸಾಮಾಜಿಕ ಅಂತರವನ್ನು ಕಾಪಾಡವುದು. ಆಡುಗೆ ಮನೆಯನ್ನು ಸ್ಯಾನಿಟೈಸ್‌ ಮಾಡುವುದು
– ಮಕ್ಕಳ ಆಟಕ್ಕಾಗಿ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ನಿರ್ಮಾಣವಾಗಿರುವ  ಪ್ರದೇಶಗಳನ್ನು ತೆರೆಯುವಂತಿಲ್ಲ.

Click to comment

Leave a Reply

Your email address will not be published. Required fields are marked *