Connect with us

Corona

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್ ದೃಢ- ಸೆಲ್ಫ್ ಐಸೊಲೇಷನ್‌

Published

on

ನವದೆಹಲಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.

ಟ್ವೀಟ್ ಮಾಹಿತಿ ನೀಡಿರುವ ನಿತಿನ್ ಗಡ್ಕರಿ ಅವರು, ನಿನ್ನೆ ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರನ್ನು ಸಂಪರ್ಕಿಸಿದೆ. ಪರೀಕ್ಷೆಯಲ್ಲಿ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಪ್ರಸ್ತುತ ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳೇ ನನಗೆ ರಕ್ಷಣೆಯಾಗಿದೆ. ಸ್ವಯಂ ಐಸೊಲೇಷನ್ ಒಳಗಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ.

ನಿತಿನ್ ಗಡ್ಕರಿ ಅವರಿಗೆ ಪಾಸಿಟಿವ್ ದೃಢವಾಗುವುದರೊಂದಿಗೆ ಮೋದಿ ಸಂಪುಟದ 7 ಕೇಂದ್ರ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಅಮಿತ್ ಶಾ, ಗಜೇಂದ್ರ ಸಿಂಗ್ ಶೇಖಾವತ್, ಕೈಲಾಸ್ ಚೌಧರಿ, ಅರ್ಜುನ್ ರಾಮ್ ಮೇಘವಾಲ್, ಧರ್ಮೇಂದ್ರ ಪ್ರಧಾನ್ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು.

Advertisement
Continue Reading Below

Click to comment

Leave a Reply

Your email address will not be published. Required fields are marked *