Connect with us

Dharwad

ನರೇಗಾ ಯೋಜನೆಯಡಿ ಗುಲಾಬಿ ಬೆಳೆದು 5 ಲಕ್ಷ ರೂ. ಆದಾಯ

Published

on

Share this

ಧಾರವಾಡ: ಜಿಲ್ಲೆಯ ಮನಸೂರು ಗ್ರಾಮದ ರೈತರಾದ ಶಂಕ್ರಪ್ಪ ಸಿದ್ದಪ್ಪ ಅಂಗಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನೆರವು ಪಡೆದು ತಮ್ಮ ಒಂದು ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆದು ಸುಮಾರು 5 ಲಕ್ಷ ರೂ ಗಳಿಗೂ ಅಧಿಕ ಆದಾಯ ಗಳಿಸಿದ್ದಾರೆ.

ಶಂಕ್ರಪ್ಪ ಸಿದ್ದಪ್ಪ ಅಂಗಡಿ ಅವರು, ತೋಟಗಾರಿಕೆ ಇಲಾಖೆ ಮೂಲಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21 ನೇ ಸಾಲಿನಲ್ಲಿ ಹೊಸ ತೋಟ ನಿರ್ಮಿಸಿಕೊಳ್ಳಲು 1 ಲಕ್ಷದ 55 ಸಾವಿರ ರೂಪಾಯಿ ಕೂಲಿ ವೆಚ್ಚ ಹಾಗೂ ಸಾಮಗ್ರಿ ಮೊತ್ತವಾಗಿ 43 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಆ ಬಳಿಕ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಲು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 45,349 ರೂಪಾಯಿ ಅನುದಾನವನ್ನು ಪಡೆದು ಗುಲಾಬಿ ಬೆಳೆದು ಜೀವನವನ್ನು ರೂಪಿಸಿಕೊಂಡು ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ಪರಿಸರ ಪ್ರೇಮ – ಬೀಟ್‍ಗೊಂದು ಮರ ಅಭಿಯಾನ

ಇಲ್ಲಿಯವರೆಗೆ ಪ್ರತಿ ದಿನಕ್ಕೆ 2000 ರಿಂದ 2,500 ಹೂಗಳನ್ನು ಕಟಾವು ಮಾಡಿರುವ ಶಂಕ್ರಪ್ಪ ಸಿದ್ದಪ್ಪ ಅಂಗಡಿಯವರು, ಅದರಲ್ಲಿ ಸುಮಾರು 6 ಲಕ್ಷ ರೂ. ಮೌಲ್ಯದ ಉತ್ಪನ್ನ ಪಡೆದಿದ್ದಾರೆ. ಮೊದಲನೇ ವರ್ಷದ ಖರ್ಚು ತೆಗೆದರೂ ಸುಮಾರು 5 ಲಕ್ಷ ರೂ ನಿವ್ವಳ ಆದಾಯ ಪಡೆದಿರುವ ರೈತನನ್ನು ನೋಡಿ, ಇದೇ ಗ್ರಾಮದ ಹಲವು ರೈತರು, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗುಲಾಬಿ ಪ್ರದೇಶ ವಿಸ್ತರಣೆಗೆ ಸಹಾಯಧನವನ್ನು ಪಡೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement