Connect with us

Districts

ಸತ್ತರೆ ಒಳ್ಳೆಯದು ಎಂಬ ಉಮೇಶ್ ಕತ್ತಿ ಹೇಳಿಕೆಯನ್ನ ಸಮರ್ಥಿಸಿಕೊಂಡ ಬೆಂಬಲಿಗರು

Published

on

– ಡಿಕೆಶಿ ಹಾಗೂ ಕುಮಾರಸ್ವಾಮಿ ವಿರುದ್ದ ಹರಿಹಾಯ್ದ ಕತ್ತಿ ಅಭಿಮಾನಿಗಳು

ಚಿಕ್ಕೋಡಿ: ಸತ್ತರೆ ಒಳ್ಳೆಯದು ಎನ್ನುವ ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನು ಅವರ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಸಚಿವರ ಹೇಳಿಕೆಗೆ ವ್ಯಾಪಕ ವಿರೋಧದ ನಡುವೆಯೇ ಸಚಿವ ಉಮೇಶ್ ಕತ್ತಿ ಬೆಂಬಲಕ್ಕೆ ಅವರ ಅಭಿಮಾನಿಗಳು ನಿಂತಿದ್ದು ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ಕರೆದು ಉಮೇಶ್ ಕತ್ತಿ ಅವರ ಬೆಂಬಲಿಗರು, ಉಮೇಶ್ ಕತ್ತಿಯವರು ಜನಪರ ಕಾಳಜಿಯಿಂದಲೇ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಮೇಶ್ ಕತ್ತಿ ಅವರ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗಿಲ್ಲ ಎಂದು ಕತ್ತಿ ಅಭಿಮಾನಿಗಳು ಕಿಡಿಕಾರಿದ್ದಾರೆ.


ಉಮೇಶ್ ಕತ್ತಿ ವಿರುದ್ದ ಮಾತನಾಡುವ ಮುನ್ನ ಯೋಚನೆಯಿಂದ ಮಾತನಾಡಿ ಡಿಕೆಶಿ ಅವರು ಜನರಿಗೆ ಧಮಕಿ ಹಾಕಿ ಶಾಸಕರಾಗಿದ್ದು, ನಮಗೂ ಗೊತ್ತಿದೆ ಎಂದು ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಉಮೇಶ್ ಕತ್ತಿಯವರು ಆಹಾರ ಸಚಿವರಾದ ನಂತರ ಅನೇಕ ಮಹತ್ತರ ಜನಪರ ಯೋಜನೆಗಳನ್ನು ಆಹಾರ ಇಲಾಖೆಯಲ್ಲಿ ಜಾರಿಗೆ ತಂದಿದ್ದಾರೆ. ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗಬಾರದು ಎನ್ನುವ ನಿಟ್ಟಿನಲ್ಲಿ ಆಹಾರ ಪದ್ದತಿ ಅನುಗುಣವಾಗಿ ಉತ್ತರ ಕರ್ನಾಟಕದ ಜನರಿಗೆ ಅಕ್ಕಿ ಬದಲು ಜೋಳ, ದಕ್ಷಿಣ ಕರ್ನಾಟಕದ ಜನರಿಗೆ ರಾಗಿ ಹಾಗೂ ಕರಾವಳಿ ಜನರಿಗೆ ಕುಚಲಕ್ಕಿ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಅವರ ಬಡವರ ಬಗೆಗಿನ ಕಾಳಜಿಯಿಂದಲೇ ಅವರು 8 ಬಾರಿ ಶಾಸಕರಾಗಿದ್ದಾರೆ. ಉಮೇಶ ಕತ್ತಿ ಅವರು ಸ್ವಲ್ಪ ಒರಟು ಸ್ವಭಾವದವರು ಹಿನ್ನೆಲೆಯಲ್ಲಿ ಸಿಟ್ಟಿನಿಂದ ಫೋನ್‍ನಲ್ಲಿ ಹಾಗೆ ಮಾತನಾಡಿರಬಹದು. ಆದರೇ ಅವರು ಎಂದೆಂದೂ ಬಡವರ ಪರವಾಗಿ ಇದ್ದಾರೆ ಎಂದು ಕತ್ತಿ ಬೆಂಬಲಿಗರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕತ್ತಿ ಬೆಂಬಲಿಗರಾದ ರವೀಂದ್ರ ಹಿಡಕಲ್, ಮಹಾದೇವ ಪಾಟೀಲ, ಅಶೋಕ ಚೌಗಲಾ, ಚಿದಾನಂದ ಗೌಡಾಡಿ, ಸಂಜಯ ಕಲ್ಲಣ್ಣವರ, ರಾಜು ಯಮಕನಮರಡಿ, ಕೆ ಎಲ್ ಜಿನರಾಳೆ, ಶಿವಾನಂದ ಜಿನರಾಳೆ ಸೇರಿದಂತೆ ಹುಕ್ಕೇರಿ ಮತಕ್ಷೇತ್ರದ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *