Connect with us

Crime

ನಟಿ ಉಮಾಶ್ರೀ ಕಾರು ಅಪಘಾತ ಪ್ರಕರಣ – ಚಿಕಿತ್ಸೆ ಫಲಿಸದೆ ವೈದ್ಯೆ ಸಾವು

Published

on

ಹುಬ್ಬಳ್ಳಿ: ನವಂಬರ್ 20ರಂದು ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ಉಮಾಶ್ರೀ ಮಾಲೀಕತ್ವದ ಇನ್ನೋವಾ ಮತ್ತು ಬಲೆನೋ ಕಾರಿನ ನಡುವೆ ಡಿಕ್ಕಿಯಾಗಿರುವ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನವಲಗುಂದ ತಾಲೂಕಿನ ಬೆಳಹಾರ ಹೆಲ್ತ್ ಆಫೀಸರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕಳೆದ ವಾರ ಗದಗದಿಂದ ಬರುತ್ತಿದ್ದ ಬಲೆನೋ ಕಾರಿಗೆ ಉಮಾಶ್ರೀ ಮಾಲೀಕತ್ವದ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿ, ಇನ್ನಿಬ್ಬರು ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಡಾ. ಸ್ಮಿತಾ ಕಟ್ಟಿ ಚಿಕಿತ್ಸೆ ಫಲಿಸದೇ ಇಂದು ಸಾವಿನ್ನಪ್ಪಿದ್ದಾರೆ. ಈ ಮೂಲಕ ಮಾರುತಿ ಸುಜುಕಿ ಬಲೆನೋ ಕಾರಿನಲ್ಲಿನಲ್ಲಿದ್ದ ಮೂವರು ಸಾವಿಗೀಡಾದಂತಾಗಿದೆ.

ಅಪಘಾತದಲ್ಲಿ ಡಾ.ಸ್ಮಿತಾ ಕಟ್ಟಿ ಅವರ ತಾಯಿ ಶೋಭಾ ಕಟ್ಟಿ ಹಾಗೂ ಚಾಲಕ ಸಂದೀಪ ವಿಭೂತಿಮಠ ಸಾವಿಗೀಡಾಗಿದ್ದರು. ಉಮಾಶ್ರೀಯವರ ಇನ್ನೋವಾ ಚಾಲಕ ಶಿವುಕುಮಾರ್ ಬಿಡನಾಳಗೆ ಸಣ್ಣಪುಟ್ಟ ಗಾಯಗಳು ಆಗಿದ್ದವು. ಆದರೆ ಈ ಘಟನೆಯಲ್ಲಿ ಡಾ.ಸ್ಮಿತಾ ಕಟ್ಟಿ ತೀವ್ರವಾಗಿ ಗಾಯಗೊಂಡಿದ್ದರು. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಡಾ. ಸ್ಮಿತಾ ಸಾವನ್ನಪ್ಪಿದ್ದಾರೆ.

ಈ ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಅಪಘಾತದ ನಂತರ ಸ್ವತಃ ನಟಿ ಉಮಾಶ್ರೀ ಗಾಯಾಳುಗಳನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in