Recent News

ಯುಗಾದಿ ಭವಿಷ್ಯ: ಹೊಸ ವರ್ಷ ಯಾರಿಗೆ ಅದೃಷ್ಟ? ಯಾರಿಗೆ ಸಂಕಷ್ಟ?

ಮೇಷ : ಒಂದಿಷ್ಟು ಒಳಿತು, ಒಂದಿಷ್ಟು ಕೆಡುಕು, ಹೆಚ್ಚು ಲಾಭದಾಯಕ ವರ್ಷ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ದೇವಿ ಪ್ರಾರ್ಥನೆ ಮಾಡಿ.

ವೃಷಭ : ಆರ್ಥಿಕ ಸಂಕಷ್ಟ ಎದುರಾಗುವ ಸಂಭವ. ಮೂರು ತಿಂಗಳ ನಂತರ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ, ಆರೋಗ್ಯದಲ್ಲಿ ಸುಧಾರಣೆ. ಲಕ್ಷ್ಮೀ ನರಸಿಂಹನ ಆರಾಧನೆ ಮಾಡಿ.

ಮಿಥುನ : ಕೆಲಸ ಕಾರ್ಯಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಅಡ್ಡಿ ಆತಂಕಗಳು ಹೆಚ್ಚು. ದೇವಿಯ ಅನುಗ್ರಹ ಪಡೆಯಿರಿ. ಶಾರದಾ ದೇವಿಯ ಪೂಜೆ ಮಾಡಿ. ಮರ, ಗಿಡಗಳಿಗೆ ನೀರು ಹಾಕಿ.

ಕರ್ಕಾಟಕ: ಆರ್ಥಿಕ ಸಂಕಷ್ಟ, ಧೈರ್ಯದಿಂದ ಮುನ್ನಡೆಯಿರಿ, ಕೃಷ್ಣನ ಆರಾಧನೆ ಮಾಡಿ, ಮನೆ ದೇವರ ಅನುಗ್ರಹ ಪಡೆಯಿರಿ.

ಸಿಂಹ : ನಿರೀಕ್ಷೆಗೆ ಮಿಗಿಲಾಗಿದ್ದನ್ನೇ ಪಡೆಯುತ್ತೀರಿ. ಹಿರಿಯರಿಗೆ ಗೌರವ ನೀಡಿ. ಸೂರ್ಯ ಮತ್ತು ಮಹಾ ವಿಷ್ಣು ಆರಾಧನೆ ಮಾಡಿ

ಕನ್ಯಾ : ಈ ವರ್ಷ ಲಾಭದಿಂದ ಕೂಡಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಲಲಿತಾ ತ್ರಿಪುರ ಸುಂದರಿಯ ಪ್ರಾರ್ಥನೆ ಮಾಡಿ. ಮಹಾಲಕ್ಷ್ಮೀ ಆರಾಧನೆ ಮಾಡಿ.

ತುಲಾ : ಈ ವರ್ಷ ಅದೃಷ್ಟದಿಂದ ಕೂಡಿದೆ. ಮುಂದಿನ ದಿನಗಳು ಅನುಕೂಲಕರವಾಗಿರಲಿವೆ. ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿದೆ ಈ ವರ್ಷ. ಶನೇಶ್ವರ ಮಂತ್ರ, ಹನುಮನ ಮಂತ್ರ ಪಠಣ ಮಾಡಿ.

ವೃಶ್ಚಿಕ ರಾಶಿ : ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಅನಾರೋಗ್ಯ ಸಮಸ್ಯೆ ಕಾಡಲಿದೆ. ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ. ಹನುಮನ ಪ್ರಾರ್ಥನೆ ಮಾಡಿ. ಇಷ್ಟ ದೇವರ ಆರಾಧನೆ ಮಾಡಿ.

ಧನಸ್ಸು : ಒಳ್ಳೆಯದನ್ನೇ ಚಿಂತೆ ಮಾಡಿ ಒಳ್ಳೆಯದಾಗುತ್ತೆ. ದೇವತಾರಾಧನೆ ಮಾಡಿ. ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡಿ. ಗುರುವಿನ ಮಾರ್ಗದರ್ಶನದಲ್ಲಿ ನಡೆಯಿರಿ. ಹನುಮ ಮಂತ್ರ ಪಠಣೆ ಮಾಡಿ.

ಮಕರ: ಮಾನಸಿಕ ಒತ್ತಡ, ಆರ್ಥಿಕ ಸಂಕಷ್ಟ. ಹಿರಿಯರ ಸೇವೆ ಮಾಡಿ. ಲೇವಾದೇವಿ ವ್ಯವಹಾರಗಳಲ್ಲಿ ಅಡ್ಡಿ. ಶನೇಶ್ವರನ ಪ್ರಾರ್ಥನೆ ಮಾಡಿ. ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಿ.

ಕುಂಭ: ಮೌನವಾಗಿ ಕೆಲಸ ಕಾರ್ಯಗಳನ್ನ ಮಾಡಿ. ದೇವಿಯ ಆರಾಧನೆ, ಮಂತ್ರ ಜಪ ಮಾಡಿ. ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ.

ಮೀನಾ : ಕೆಲಸ ಕಾರ್ಯಗಳಲ್ಲಿ ಲಾಭ, ಇಷ್ಟಾರ್ಥ ಸಿದ್ಧಿ, ಶ್ರೀನಿವಾಸನ ಪ್ರಾರ್ಥನೆ ಮಾಡಿ.

Leave a Reply

Your email address will not be published. Required fields are marked *