Districts
ರೇಣುಕಾಚಾರ್ಯ ಕೋಪ ಸಹಜ: ಸಂಸದ ರಾಘವೇಂದ್ರ

ಉಡುಪಿ: ಮಾಜಿ ಸಚಿವ ಶಾಸಕ ರೇಣುಕಾಚಾರ್ಯಗೆ ನೋವು ಇರೋದು ಸಹಜ. ಒಂದು ಚೌಕಟ್ಟಿನ ಒಳಗೆ ಕೂತು ಮಾತನಾಡಿದರೆ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
ಶಾಸಕ ರೇಣುಕಾಚಾರ್ಯ ದೆಹಲಿ ಪ್ರವಾಸ ಹಿನ್ನೆಲೆಯಲ್ಲಿ ಸಂಸದ ರಾಘವೇಂದ್ರ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತಾಡಿದರು. ರೇಣುಕಾಚಾರ್ಯ ಅವರು ಸಹಜವಾಗಿಯೇ ತಮ್ಮ ನೋವನ್ನು ಬೇರೆಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಮನುಷ್ಯ ಅಂದ ಮೇಲೆ ನೋವು ಇರೋದು ಸಹಜ. ಒಬ್ಬೊಬ್ಬರಿಗೂ ಅವರದೇ ವೈಯಕ್ತಿಕ ವಿಚಾರ ಇರುತ್ತದೆ. ಒಂದು ಚೌಕಟ್ಟಿನಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ಇದೆ ಎಂದರು. ಒಂದೆರಡು ದಿನ ನೋವನ್ನು ಹೊರಹಾಕುತ್ತಾರೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತೇವೆ ಎನ್ನುವ ವಿಶ್ವಾಸವಿದೆ ಅಂತ ಹೇಳಿದರು.
