Tuesday, 18th February 2020

ಬಿಎಸ್‍ವೈ ಕಷ್ಟಕಾಲ ನೀರಾಯ್ತು, ಹೆಚ್‍ಡಿಕೆ ಸೈಲೆಂಟಾದ್ರೆ ಒಳ್ಳೆದು: ಪ್ರಕಾಶ್ ಅಮ್ಮಣ್ಣಾಯ

– ಸಿದ್ದರಾಮಯ್ಯ ಜವಾಬ್ದಾರಿ ಬಿಟ್ಟು ಮನೆಗೆ ಹೋಗ್ತಾರೆ

ಉಡುಪಿ: ಅಮಾವಾಸ್ಯೆ ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ಶನಿ ಗ್ರಹದ ಮಕರ ರಾಶಿಯ ಪ್ರವೇಶವಾಗಿದೆ. ದೇಶದಲ್ಲಿ ರಾಜ್ಯದಲ್ಲಿ ಹಲವಾರು ಬಂಧನಗಳನ್ನು ಈ ಬೆಳವಣಿಗೆ ಸೂಚಿಸುತ್ತದೆ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಯಕರ, ಹೋರಾಟಗಾರರ, ಆರೋಪ ಹೊತ್ತವರ ಬಂಧನ ಕಾಲ ಇದು. ಜಾಗರೂಕತೆಯೇ ಎಲ್ಲದಕ್ಕೂ ಮದ್ದು, ಎಲ್ಲದರ ಪರಿಹಾರ ಎಂದು ಕಿವಿಮಾತು ಹೇಳಿದರು. ಮಾಜಿ ಸಚಿವ ಡಿಕೆ ಶಿವಕುಮಾರ್ ಸಂಕಷ್ಟ ಪರಿಹಾರವಾಗುತ್ತೆ. ಕಷ್ಟ ಕಾಲಗಳೆಲ್ಲ ದೂರವಾಗಿ ಬಿಎಸ್‍ವೈ ಅಧಿಕಾರ ತ್ಯಜಿಸಿ ವಿಶ್ರಾಂತಿ ಪಡೆಯುವ ಯೋಗವಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಕೆಲಸವಿಲ್ಲದೆ ನೆಮ್ಮದಿ ಎಂದ ಅವರು, ವಿರೋಧ ಪಕ್ಷಕ್ಕೆ ಕೆಲಸವಿಲ್ಲದೆ ಸಿದ್ದರಾಮಯ್ಯಗೆ ಫುಲ್ ರೆಸ್ಟ್ ಮಾಡುತ್ತಾರೆ. ಸಿದ್ದರಾಮಯ್ಯನ ಅಧಿಕಾರಗಳೆಲ್ಲ ದೂರವಾಗಿ ನೆಮ್ಮದಿಗೆ ಜಾರುತ್ತಾರೆ ಎಂದು ಭವಿಷ್ಯ ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿಗೆ ಕೂಲಾಗಿದ್ದರೆ ಒಳ್ಳೆದು. ಅವರ ಹೇಳಿಕೆಗಳಿಂದಲೇ ಅವರ ವರ್ಚಸ್ಸು ಹಾಳಾಗುತ್ತದೆ ಎಂದು ಹೇಳಿದರು.

ಕುಮಾರಸ್ವಾಮಿ ಆರೋಗ್ಯದಲ್ಲಿ ದುಷ್ಪರಿಣಾಮದ ಆತಂಕವಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಮನಸ್ಥಿತಿಯನ್ನು ಸರಿಯಾಗಿಟ್ಟುಕೊಳ್ಳಿ. ನಿಮ್ಮ ಬಿಪಿ ಹತೋಟಿಗೆ ತಂದುಕೊಳ್ಳಿ ಎಂದರು. ಪ್ರಧಾನಿ ಮೋದಿಯ ವಿಮಾನ ಟೇಕಾಫ್ ಆಗುವ ಕಾಲ ಕಳೆಯಿತು. ಅಲ್ಲೋಲ ಕಲ್ಲೋಲ ಆಗುತ್ತಿದೆ. ಮೋದಿಗೆ ಇನ್ಮುಂದೆ ಶುಭಕಾಲ ಇರುತ್ತದೆ. ವಿಮಾನ ಆಕಾಶ ಸೇರುವ ಕಾಲ ಇದು ಎಂದರು.

ಬಾಂಬರ್ ಆದಿತ್ಯನ ಬಗ್ಗೆ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ. ಆತನ ಮೈಂಡ್ ಪ್ರೋಗ್ರಾಮಿಂಗ್ ಆತನಿಗೆ ಕುತ್ತು ತಂದಿದೆ. ತಂತ್ರಜ್ಞಾನ ಸದ್ಬಳಕೆ ಮಾಡದೆ ತನ್ನನ್ನು ತಾನೇ ಬಾವಿಗೆ ತಳ್ಳಿಕೊಂಡ ಎಂದರು.

Leave a Reply

Your email address will not be published. Required fields are marked *