ಸಿಎಂ ಕಚೇರಿಯಿಂದ ಕಾಣೆಯಾಯ್ತಾ ಬಿಬಿಎಂಪಿ ಫೈಲ್? – ಸಾವಿರಾರು ಕೋಟಿ ರೂ. ವ್ಯವಹಾರದ ಕಡತ ನಾಪತ್ತೆ

Advertisements

ಬೆಂಗಳೂರು: ಬಿಬಿಎಂಪಿಗೆ (BBMP) ಸಂಬಂಧಿಸಿದ ಮಹತ್ವದ ಕಡತವೊಂದು (File)  ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಚೇರಿಯಿಂದ ನಾಪತ್ತೆಯಾಗಿರೋ ಶಂಕೆ ವ್ಯಕ್ತವಾಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.

Advertisements

ಮುಖ್ಯಮಂತ್ರಿಗಳ ಮಾಹಿತಿಗೆಂದು ಕಳೆದ ವರ್ಷ ಬೆಂಗಳೂರು ನಗರಾಭಿವೃದ್ಧಿ ಕಚೇರಿಯಿಂದ ಸಿಎಂ ಕಚೇರಿಗೆ ಕಳುಹಿಸಲಾಗಿದ್ದ ಬೆಂಗಳೂರಿನ ಜಾಹೀರಾತು ನಿಯಮ-2019ರ ಕಡತ ಮತ್ತೆ ನಗರಾಭಿವೃದ್ಧಿ ಕಚೇರಿಗೆ ವಾಪಸ್ ಹೋಗಿಲ್ಲ. ಈ ಸಂಬಂಧ ಸಿಎಂ ಪ್ರಧಾನ ಕಾರ್ಯದರ್ಶಿಗೆ ಇದೇ ನ.22ರಂದು ಪತ್ರ ಬರೆದಿರುವ ಬೆಂಗಳೂರು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, 2021ರ ಡಿಸೆಂಬರ್ 7ರಂದು ಸಿಎಂ ಕಚೇರಿಗೆ ಕಳಿಸಲಾಗಿದ್ದ ಬಿಬಿಎಂಪಿ ಜಾಹೀರಾತು ನಿಯಮ-2019 ಫೈಲ್ ಇನ್ನೂ ವಾಪಸ್ ಬಂದಿಲ್ಲ. ಕೂಡ್ಲೇ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ

Advertisements

ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಮಾಹಿತಿ ಒದಗಿಸಬೇಕಿರುವುದರಿಂದ ಸದರಿ ಕಡತವನ್ನು ನಗರಾಭಿವೃದ್ಧಿಗೆ ಹಿಂತಿರುಗಿಸಿ ಎಂದು ಕೋರಿದ್ದಾರೆ. ಆದ್ರೆ, ಇದಕ್ಕೆ ಈವರೆಗೂ ಸಿಎಂ ಕಚೇರಿ ಯಾವುದೇ ಉತ್ತರ ನೀಡಿಲ್ಲ. ಇದರಿಂದ ನಗರಾಭಿವೃದ್ಧಿ ಇಲಾಖೆ ಕಂಗಾಲಾಗಿದೆ. ಜೊತೆಗೆ ಸಿಎಂ ಕಚೇರಿಯಿಂದ ಈ ಕಡತ ನಾಪತ್ತೆಯಾಗಿದ್ಯಾ? ಯಾರಾದ್ರೂ ಎಗರಿಸಿಕೊಂಡು ಹೋಗಿದ್ದಾರಾ ಎಂಬ ಅನುಮಾನ ಮೂಡಿದೆ. ಅಂದ ಹಾಗೆ, ಬೆಂಗಳೂರಿನ ಎಲ್ಲೆಲ್ಲಿ ಜಾಹೀರಾತು ಹಾಕಬೇಕು? ಎಲ್ಲೆಲ್ಲಿ ಹಾಕಬಾರದು? ಎಷ್ಟು ದರ ವಿಧಿಸಬೇಕು ಎಂಬುದನ್ನು ನಿರ್ಧರಿಸುವ ಮಹತ್ವದ ಕಡತ ಇದಾಗಿದೆ. ಇದ್ರಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಅಡಗಿದೆ. ಈ ಫೈಲ್ ಇದೀಗ ನಾಪತ್ತೆಯಾಗಿದೆ. ಇದನ್ನೂ ಓದಿ: ಮಹಿಳೆಯರು ಏನೂ ಧರಿಸದಿದ್ರೂ ಚೆನ್ನಾಗಿ ಕಾಣಿಸುತ್ತಾರೆ: ಬಾಬಾ ರಾಮ್‌ದೇವ್

Live Tv

Advertisements