Connect with us

Bengaluru City

ಕ್ಯಾಬ್‍ನಲ್ಲಿ ಟೆಕ್ಕಿ ಯುವತಿ ನಿದ್ದೆ – ಹಿಂಬದಿ ಸೀಟಿಗೆ ಹೋಗಿ ಚಾಲಕನಿಂದ ಲೈಂಗಿಕ ದೌರ್ಜನ್ಯ

Published

on

– ಉಬರ್ ಕ್ಯಾಬ್‍ನಲ್ಲಿ ನಿದ್ದೆ ಮಾಡೋ ಮುನ್ನ ಹುಷಾರ್

ಬೆಂಗಳೂರು: ಕ್ಯಾಬ್‍ನಲ್ಲಿ ನಿದ್ದೆ ಮಾಡುವ ಮುನ್ನ ಯುವತಿಯರು ಹುಷಾರಾಗಿರಿ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಟೆಕ್ಕಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಉಬರ್ ಕ್ಯಾಬ್ ಚಾಲಕನ ಬಂಧನವಾಗಿದೆ.

ಬಂಧಿತ ಆರೋಪಿಯನ್ನು ಕ್ಯಾಬ್ ಚಾಲಕ ನಾಗರಾಜ್ ಎಂದು ಗುರುತಿಸಲಾಗಿದೆ. ಈತ 25 ವರ್ಷದ ಟೆಕ್ಕಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಚಾಲಕನ ವಿರುದ್ದ ಕೇಸ್ ದಾಖಲಾಗಿದೆ.

ಏನಿದು ಪ್ರಕರಣ?
ಟೆಕ್ಕಿ ಯುವತಿ ಮಾರ್ಚ್ 7ರ ಮಧ್ಯಾಹ್ನ ಹೊಸೂರು ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿದ್ದ ಸ್ನೇಹಿತರನ್ನು ಭೇಟಿ ಮಾಡಿ, ಮನೆಗೆ ತೆರಳಲು ಕ್ಯಾಬ್ ಹತ್ತಿ ಹಿಂಬದಿ ಸೀಟ್ ನಲ್ಲಿ ಕುಳಿತು ನಿದ್ದೆ ಮಾಡಿದ್ದಾಳೆ. ಈ ವೇಳೆ ಆರೋಪಿ ಚಾಲಕ ಸ್ವಲ್ಪ ದೂರ ಕ್ರಮಿಸಿ ಕಾರು ನಿಲ್ಲಿಸಿ ಹಿಂಬದಿ ಸೀಟ್‍ಗೆ ಬಂದು ಕುಳಿತು ಈ ಕೃತ್ಯ ಎಸಗಿದ್ದಾನೆ.

ಕಾಮುಕ ಕ್ಯಾಬ್ ಚಾಲಕ ಸಂತ್ರಸ್ತೆಯ ಖಾಸಗಿ ಅಂಗಾಂಗಳನ್ನು ಸ್ಪರ್ಶಿಸಿ ದೌರ್ಜನ್ಯ ಎಸಗಿದ್ದಾನೆ. ಯುವತಿ ಎಚ್ಚರಗೊಂಡು ಕಿರುಚಿಕೊಳ್ಳುತ್ತಿದ್ದಂತೆ ಚಾಲಕ ಸೀಟ್‍ಗೆ ವಾಪಸ್ ಆಗಿ ವೇಗವಾಗಿ ಕಾರು ಚಾಲನೆ ಮಾಡಲು ಆರಂಭಿಸಿದ್ದಾನೆ. ನಂತರ ಸಂತ್ರಸ್ತೆ ಇಳಿಯಬೇಕಿದ್ದ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಕ್ಯಾಬ್ ನಿಲ್ಲಿಸಿದ್ದಾನೆ.

ಕೂಡಲೇ ಕ್ಯಾಬ್‍ನಿಂದ ಇಳಿದು ಸಂತ್ರಸ್ತೆ ಮನೆ ತಲುಪಿದ್ದಳು. ಈ ಬಗ್ಗೆ ಆರೋಪಿ ಚಾಲಕನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾಳೆ. ಟವರ್ ಲೊಕೇಶನ್, ಗಾಡಿ ನಂಬರ್ ಆಧಾರದ ಮೇಲೆ ಚಾಲಕನನ್ನ ಬಂಧಿಸಿ ಪೊಲೀಸರು ಜೈಲಿಗೆ ಹಾಕಿದ್ದಾರೆ.