84ರ ವೃದ್ಧೆಯ ಶವ ಹೊರ ತೆಗೆದು ಅತ್ಯಾಚಾರಗೈದ ಅಪ್ರಾಪ್ತರು!

ಫಿಲಿಫೈನ್ಸ್: ಅಪ್ರಾಪ್ತ ಬಾಲಕರಿಬ್ಬರು 84ರ ವೃದ್ಧೆಯ ಶವ ಹೊರ ತೆಗೆದು ಆತ್ಯಾಚಾರಗೈದಿರುವ ಆಘಾತಕಾರಿ ಘಟನೆಯೊಂದು ಡಿಗೋಸ್ ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸೆಪ್ಟೆಂಬರ್ 29ರಂದು ಡಿಗೋಸ್ ಸಿಟಿಯ 84 ವರ್ಷದ ಇಸಾಬೆಲ್ ಬಾಸ್ಟಾಸ್ ಮೃತದೇಹವನ್ನು ಕುಟುಂಬಸ್ಥರು ನಗರದ ಸಾರ್ವಜನಿಕ ಸ್ಮಶಾನದಲ್ಲಿ ದಫನ್ ಮಾಡಿದ್ದರು. ಮರುದಿನ ಮತ್ತೆ ಸ್ಮಶಾನಕ್ಕೆ ಆಗಮಿಸಿದ ಕುಟುಂಬಸ್ಥರಿಗೆ ಶಾಕ್ ಎದುರಾಗಿತ್ತು. ಸಮಾದಿಯಲ್ಲಿದ್ದ ಶವವನ್ನು ಹೊರ ತಗೆಯಲಾಗಿತ್ತು. ಮೃತದೇಹದ ಮೇಲಿನ ವಸ್ತ್ರಗಳೆಲ್ಲಾ ಅಸ್ತವ್ಯಸ್ಥವಾಗಿತ್ತು.

ಕುಟುಂಬಸ್ಥರು ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆಯಾಧಾರದ ಮೇಲೆ ಅಪ್ರಾಪ್ತರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕರಿಬ್ಬರು ಪ್ರಾಥಮಿಕ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಶವದ ಜೊತೆಗೆ ಇರಿಸಲಾಗುವ ಅಮೂಲ್ಯ ವಸ್ತುಗಳನ್ನು ಕದಿಯಲು ಸಮಾಧಿ ಅಗೆದಿದ್ದಾರೆ. ಈ ವೇಳೆ ಶವದ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಶಂಕೆಗಳು ವ್ಯಕ್ತವಾಗಿವೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

ಆರೋಪಿ ಬಾಲಕರ ಮೇಲೆ ಒತ್ತಡ ಹಾಕಿದ್ದರಿಂದ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಪ್ರಾಪ್ತರ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಅಪ್ರಾಪ್ತರನ್ನು ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿದೆ.

Leave a Reply

Your email address will not be published. Required fields are marked *