Connect with us

International

ಮೇಲ್ಛಾವಣಿ ಮೇಲೆ ಸಂಗಾತಿಯೊಂದಿಗೆ ಕ್ರೀಡಾಪಟು ಕಿಸ್ ಫೋಟೋ ವೈರಲ್ – ಜೋಡಿ ಅರೆಸ್ಟ್

Published

on

ಟೆಹ್ರಾನ್: ಕಟ್ಟಡದ ಮೇಲ್ಛಾವಣಿ ಮೇಲೆ ಜೋಡಿಯೊಂದು ಮುತ್ತು ನೀಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಇಬ್ಬರು ಪಾರ್ಕರ್ ಕ್ರೀಡಾಪಟುಗಳನ್ನು ಪೊಲೀಸರು ಬಂಧಿಸಿರುವ ಘಟನೆ ಇರಾನ್‍ನಲ್ಲಿ ನಡೆದಿದೆ.

ಜನಪ್ರಿಯ ಪಾರ್ಕರ್ ಕ್ರೀಡಾಪಟು ಅಲಿರೆಜಾ ಜಪಲಾಘಿ ಮತ್ತು ಅವರ ಸ್ಟಂಟ್ ಸಂಗಾತಿಯನ್ನು ಬಂಧಿಸಲಾಗಿದೆ. ಇತ್ತೀಚೆಗೆ ಜಪಲಾಘಿ ಕಟ್ಟಡದ ಛಾವಣಿಯ ಮೇಲೆ ಕುಳಿತು ಮಹಿಳೆಯೊಂದಿಗೆ ಕಿಸ್ ಮಾಡುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಆ ಫೋಟೋ ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಅಸಾಂಪ್ರದಾಯಿಕ ವರ್ತನೆ ಮತ್ತು ಷರಿಯಾ ಕಾನೂನಿಗೆ ವಿರುದ್ಧವಾದ ಕಾರಣ ಇಬ್ಬರನ್ನು ಬಂಧಿಸಲಾಯಿತು. ಜಪಲಾಘಿಯನ್ನು ಟೆಹ್ರಾನ್‍ನ ಸೈಬರ್ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಹೊಸೆನ್ ರಹೀಮಿ ತಿಳಿಸಿದ್ದಾರೆ.

ಜಪಲಾಘಿ ಮತ್ತು ಆತನ ಸಂಗಾತಿ ನಿಯಮ ಮೀರಿ ಅಶ್ಲೀಲ ವರ್ತನೆಗೆ ತೋರಿಸಿದ್ದಾರೆ. ಅಲ್ಲದೇ ಕಿಸ್ ಮಾಡುತ್ತಿರುವ ಅನೇಕ ಫೋಟೋವನ್ನು ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಅನುಚಿತ ಮತ್ತು ಅವಿವೇಕದ ನಡವಳಿಕೆಯನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಜಪಲಾಘಿ ಇನ್‍ಸ್ಟಾಗ್ರಾಂನಲ್ಲಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅವರ ಬಂಧನದಿಂದ ಸಾಮಾಜಿಕ ಜಾಲತಾಣಗಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅನೇಕರು ಇರಾನ್‍ನಲ್ಲಿ ಪ್ರಸಿದ್ಧರಾಗಿರುವ ಪಾರ್ಕರ್ ಕ್ರೀಡಾಪಟುವನ್ನು ಬೆಂಬಲಿಸಿದ್ದಾರೆ ಎಂದು ಟೆಹ್ರಾನ್ ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರು ಮಹಿಳೆಯ ಗುರುತನ್ನು ಬಹಿರಂಗ ಪಡಿಸಲಿಲ್ಲ.