Saturday, 23rd March 2019

Recent News

ಪಿಕ್‍ನಿಕ್‍ಗೆಂದು ಕರೆದು ಗೆಳೆಯನಿಂದ್ಲೇ ಅಪ್ರಾಪ್ತೆಯರ ಮೇಲೆ 7ದಿನ ಅತ್ಯಾಚಾರ..!

ರಾಂಚಿ: ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಏಳು ದಿನಗಳ ಕಾಲ ಕೂಡಿಹಾಕಿ ಅತ್ಯಾಚಾರ ಮಾಡಲಾಗಿದೆ. ಈ ಸಂಬಂಧ ಶುಕ್ರವಾರ ಟಾಟಿಸಿಲ್ವಾಯಿ ಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಘಟನೆ ಜಾರ್ಖಂಡ್‍ನ ಟಾಟಿಸಿಲ್ವಾಯಿನಲ್ಲಿ ನಡೆದಿದ್ದು, ಆರೋಪಿಗಳಲ್ಲಿ ಓರ್ವನನ್ನು ಟಾಟಿಸಿಲ್ವಾಯಿ ನಿವಾಸಿ ಮನೀಶ್ ಕುಮಾರ್ ಎಂದು ಗುರುತಿಸಲಾಗಿದೆ. 13 ಮತ್ತು 16 ವಯಸ್ಸಿನ ಅಪ್ರಾಪ್ತ ಬಾಲಕಿಯರ ಮೇಲೆ ಒಂದು ವಾರದವರೆಗೂ ಅತ್ಯಾಚಾರ ಎಸಗಿದ್ದಾನೆ.

ಘಟನೆ ವಿವರ:
ಜನವರಿ 2ರಂದು ಸಂತ್ರಸ್ತೆಯರಿಬ್ಬರು ಕಾಣೆಯಾಗಿದ್ದು, ಈ ಬಗ್ಗೆ ಜನವರಿ 7 ರಂದು ಸಂತ್ರಸ್ತೆಯ ತಾಯಿ ಜಗನ್ನಾಥಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಾಲಕಿಯರ ತಾಯಿಯ ಹೇಳಿಕೆಯ ಮೇರೆಗೆ ಎಫ್‍ಐಆರ್ ದಾಖಲಿಸಿಕೊಂಡಿದ್ದೆವು ಎಂದು ಜಗನ್ನಾಥ್ಪುರ ಪೊಲೀಸ್ ಠಾಣೆಯ ಅಧಿಕಾರಿ ಅನಿಲ್ ಕರ್ಮಕರ್ ಹೇಳಿದ್ದಾರೆ.

ಆರೋಪಿಗಳಲ್ಲಿ ಒಬ್ಬ ನಮ್ಮ ಸ್ನೇಹಿತನಾಗಿದ್ದನು ಎಂದು ಸಂತ್ರಸ್ತೆಯರು ಹೇಳಿದ್ದಾರೆ. ಆತ ಜನವರಿ 2ರಂದು ಟಾಟಿಸಿಲ್ವಾಯಿಯಲ್ಲಿ ನಾವು ಪಿಕ್‍ನಿಕ್ ಮಾಡುತ್ತಿದ್ದೇವೆ ನೀವು ಬಂದು ಸೇರಿಕೊಳ್ಳಿ ಎಂದು ಕರೆದಿದ್ದಾನೆ. ಅದರಂತೆಯೇ ಇಬ್ಬರೂ ಬಾಲಕಿಯರು ಆತ ಹೇಳಿದ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ಅವರಿಬ್ಬರನ್ನು ಕೂಡಿಹಾಕಿ ಏಳು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಎಸ್.ಪಿ. ಅಶುತೋಷ್ ಶೇಖರ್ ತಿಳಿಸಿದ್ದಾರೆ.

ಇತ್ತ ಕಾಣೆಯಾದ ಬಾಲಕಿಯರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡಿದ್ದು, ಅವರ ಹುಡುಕಾಟಕ್ಕಾಗಿ ಒಂದು ತಂಡವನ್ನು ಪೊಲೀಸರು ನಿಯೋಜಿಸಿದ್ದರು. ಬಳಿಕ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡಿ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯಕ್ಕೆ ಪೊಲೀಸರು ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳುತ್ತಾರೆ. ಈ ಕುರಿತು ಪೋಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *