Saturday, 20th July 2019

ಅಕ್ರಮವಾಗಿ ಪಿಸ್ತೂಲ್, ಜೀವಂತ ಗುಂಡು ಇಟ್ಕೊಂಡು ತಿರುಗ್ತಿದ್ದ ಇಬ್ಬರ ಬಂಧನ

ಕಲಬುರಗಿ: ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಗುಂಡು ಇಟ್ಟುಕೊಂಡು ತಿರುಗಾಡುತ್ತಿದ್ದ ಇಬ್ಬರನ್ನು ಡಿಸಿಆರ್ ಬಿ ಘಟಕದ ಪೊಲೀಸರು ಬಂಧಿಸಿದ್ದಾರೆ.

ಕೋಗನೂರಿನ ಹಸನ್‍ಸಾಬ್ ಬಾವಾಸಾಬ್ ಹತ್ತರಕಿ ಹಾಗೂ ಲಕ್ಷ್ಮಿಕಾಂತ ಶೇಖಜಿ ಬಂಧಿತರು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೋಗನೂರು ಗ್ರಾಮದ ಕಣ್ಣಿ ಮಾರ್ಕೆಟ್‍ನ ಎಂ.ಎಸ್.ಕೆ. ಮಿಲ್ ಬಳಿ ಇಬ್ಬರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರು

ಬಾವಾಸಾಬ್ ಹತ್ತರಕಿ ಹಾಗೂ ಲಕ್ಷ್ಮಿಕಾಂತ ಶೇಖಜಿ ಇಬ್ಬರು ಪಿಸ್ತೂಲ್ ಹಿಡಿದುಕೊಂಡು ತಿರುಗಾಡುತ್ತಿರುವುದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಡಿಸಿಆರ್ ಬಿ ಘಟಕದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *