Connect with us

Districts

ನಿಮ್ಮ ಕಾಲುಬಾಯಿ ರೋಗದಿಂದ ಉಪಚುನಾವಣೆ ಸೋತಿದ್ದೀರಿ- ಪ್ರತಾಪ್ ಸಿಂಹ, ಪ್ರಿಯಾಂಕ ಖರ್ಗೆ ಟ್ಟಿಟ್ಟರ್ ವಾರ್

Published

on

ಮೈಸೂರು: ಸಂಸದ ಪ್ರತಾಪ್ ಸಿಂಹ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಮಧ್ಯೆ ಟ್ವಿಟ್ಟರ್ ವಾರ್ ನಡೆದಿದೆ.

ಉಪಚುನಾವಣೆ ಫಲಿತಾಂಶ ಚರ್ಚೆಯ ವೇಳೆ ಪ್ರತಾಪ್ ಸಿಂಹರನ್ನು ಪ್ರಿಯಾಂಕ ಖರ್ಗೆ `ಪೇಪರ್ ಸಿಂಹ’ ಎಂದು ಕರೆದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ, ನಿಮ್ಮ ಪ್ರಿಯಾಂಕಾ ಎಂಬ ಹೆಸರೇ ನೆಹರು ಕುಟುಂಬದ ಗುಲಾಮಗಿರಿಯ ಸಂಕೇತ. ಮಾತಾಡುವಾಗ ಎಚ್ಚರವಿರಲಿ ಎಂದಿದ್ದಾರೆ. ಇದೇ ವೇಳೆ ನಿಮಗೆ ತಾಕತ್ ಇದ್ದರೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಂತ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬೇಕಿದ್ದರೆ ನಿಮ್ಮ ಎದುರಲ್ಲೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಅಂತ ಪ್ರತಿಸವಾಲು ಹಾಕಿದ್ದಾರೆ.

ಸವಾಲಿಗೆ ಉತ್ತರಿಸಿದ ಪ್ರತಾಪ್ ಸಿಂಹ, ನಾನು ನಿಮ್ಮ ಸಿಎಂ ತವರಿನಲ್ಲೆ ನಿಂತು ಗೆದ್ದಿದ್ದೇನೆ. ಮೀಸಲು ಕ್ಷೇತ್ರದಲ್ಲಿ ಸೋತಿರುವ ನೀವೇಕೆ, ನಿಮ್ಮ ತಂದೆಯೇ ನನ್ನ ಎದುರು ಸ್ಪರ್ಧಿಸಲಿ ಎಂದು ಪಂಥಾಹ್ವಾನ ನೀಡಿದ್ದಾರೆ.

ಇದಕ್ಕೆ ಪ್ರಿಯಾಂಕ್ ಖರ್ಗೆ, ನೀವು ಸೋಲಿನಿಂದ ಪಾಠ ಕಲಿತಿಲ್ಲ. ನನ್ನನ್ನು ಗೇಲಿ ಮಾಡುತ್ತಿದ್ದೀರಿ. ನಿಮ್ಮ ಕಾಲುಬಾಯಿ ರೋಗದಿಂದ ಉಪ ಚುನಾವಣೆ ಸೋತಿದ್ದೀರಿ ಅಂತ ಕುಟುಕಿದ್ದಾರೆ.