Connect with us

Districts

ಸಿನಿಮಾ ಸ್ಟೈಲ್‍ನಲ್ಲಿ ಅತ್ತೆ ಮಗನ ಜೊತೆ ವಧು ಎಸ್ಕೇಪ್

Published

on

ತುಮಕೂರು: ರಾತ್ರೋರಾತ್ರಿ ವಿಷ ಕುಡಿಯುವ ಹೈ ಡ್ರಾಮಾ ಮಾಡಿ ವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಶಿರಾ ತಾಲೂಕಿನ ಮಳೆಕೋಟೆ ಗ್ರಾಮದಲ್ಲಿ ನಡೆದಿದೆ.

ಮಳೆಕೋಟೆ ಗ್ರಾಮದ ಯುವತಿಗೆ ದೊಡ್ಡಗುಳ ಗ್ರಾಮದ ಜೊತೆ ಮದುವೆ ಫಿಕ್ಸ್ ಆಗಿತ್ತು. ಇಂದು ಮಾಂಗಲ್ಯಧಾರಣೆ ಕಾರ್ಯಕ್ರಮವಿತ್ತು. ಆದರೆ ಶನಿವಾರ ರಾತ್ರಿ ವಿಷ ಕುಡಿಯುವ ನಾಟಕವಾಡಿದ್ದು, ಮೈ ಮೇಲೆ ವಿಷ ಚೆಲ್ಲಿಕೊಂಡು ಹೈ ಡ್ರಾಮಾ ಮಾಡಿದ್ದಾಳೆ. ಇದನ್ನು ನೋಡಿ ಮನೆಯವರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.

ಸಿನಿಮಾ ರೀತಿಯಲ್ಲಿ ಆಸ್ಪತ್ರೆಯಿಂದಲೇ ವಧು ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಅತ್ತೆ ಮಗ ಚೇತನ್ ನೊಂದಿಗೆ ಎಸ್ಕೇಪ್ ಆಗಿದ್ದಾಳೆ. ವಧು ಮತ್ತು ಅತ್ತೆ ಮಗ ಚೇತನ್ ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಮನೆಯವರಿಗೆ ಅವರು ಹೇಳಿಲ್ಲ. ಇತ್ತ ಪೋಷಕರು ಕೂಡ ಅವರಿಬ್ಬರು ಸಂಬಂಧಿಗಳಾಗಿದ್ದರಿಂದ ಸಹಜವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದುಕೊಂಡಿದ್ದಾರೆ.

ಈ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.