Crime
ಉಚ್ಚೆ ಮಂಜನ ಕೊಲೆ ಕೇಸ್ನಲ್ಲಿ ಕ್ಯಾಟ್, ಮಂಡಲ, ದುಬ್ಬ ಅರೆಸ್ಟ್

ತುಮಕೂರು: ರೌಡಿಶೀಟರ್ ಆರ್ಎಕ್ಸ್ ಮಂಜ ಅಲಿಯಾಸ್ ಉಚ್ಚೆ ಮಂಜನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಬಂಧಿತರನ್ನ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬೆಂಗಳೂರಿನ ಅಜಯ್ ಅಲಿಯಾಸ್ ಕ್ಯಾಟ್ (19), ತುಮಕೂರಿನ ಅಮಾನ್ (20), ಮನೋಜ್ ಅಲಿಯಾಸ್ ಮಂಡಲ (22) ಮತ್ತು ಮಹೇಶ್ ಅಲಿಯಾಸ್ ದುಬ್ಬ (21) ಬಂಧಿತ ಆರೋಪಿಗಳು. ಇದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತೋರ್ವ ಆರೋಪಿ ಅರುಣ ಅಲಿಯಾಸ್ ಲಾಂಗ್ ಅರುಣ್ ತಲೆಮರೆಸಿಕೊಂಡಿದ್ದಾನೆ.
ಆರ್ಎಕ್ಸ್ ಮಂಜ ಅಲಿಯಾಸ್ ಉಚ್ಚೆ ಮಂಜ ಡಿಸೆಂಬರ್ 2ರಂದು ನಡೆದಿದ್ದ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡರವಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದನು. ಹಾಗಾಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದಲೇ ಮಂಜನ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
