Bengaluru City
ಡಿವೈಡರ್ ದಾಟಿ ಕ್ಯಾಂಟರ್ಗೆ ಫಾರ್ಚೂನರ್ ಡಿಕ್ಕಿ – ನಜ್ಜುಗುಜ್ಜಾಯ್ತು ಕಾರು

ನೆಲಮಂಗಲ: ರಸ್ತೆ ಡಿವೈಡರ್ ದಾಟಿ ಕ್ಯಾಂಟರ್ಗೆ ಟೊಯೊಟಾ ಫಾರ್ಚೂನರ್ ಕಾರು ಡಿಕ್ಕಿ ಹೊಡೆದ ಘಟನೆ ಬೆಂಗಳೂರು ಹೊರ ವಲಯದ ನೆಲಮಂಗಲದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ತುಮಕೂರು ರಸ್ತೆಯ ಕುಲುವನಹಳ್ಳಿ ಬಳಿ ವೇಗದಲ್ಲಿ ಸಂಚರಿಸುತ್ತಿದ್ದ ಕೆಎ 01 ಎಂಯು 6646 ಸಂಖ್ಯೆಯ ಕಾರು ಡಿವೈಡರ್ ದಾಟಿ ಕ್ಯಾಂಟರ್ಗೆ ಗುದ್ದಿದೆ.
ಭೀಕರ ಅಪಘಾತದಲ್ಲಿ ಐಶಾರಾಮಿ ಕಾರು ನಜ್ಜುಗುಜ್ಜಾಗಿ ಹೋಗಿದೆ. ಫಾರ್ಚೂನರ್ ಗುದ್ದಿದ ರಭಸಕ್ಕೆ ಕ್ಯಾಂಟರ್ನ ಮುಂಭಾಗಕ್ಕೆ ಹಾನಿಯಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
